ಗೆಳೆಯ ರೋಹ್ಮಾನ್ ಜತೆ ಸುಶ್ಮಿತಾ ಸೇನ್ ದೋಣಿ ವಿಹಾರ: ಪೋಟೋ ವೈರಲ್

ಗೆಳೆಯ ರೋಹ್ಮಾನ್ ಜತೆ ಸುಶ್ಮಿತಾ ಸೇನ್ ದೋಣಿ ವಿಹಾರ: ಪೋಟೋ ವೈರಲ್

YK   ¦    Sep 16, 2019 03:46:47 PM (IST)
ಗೆಳೆಯ ರೋಹ್ಮಾನ್ ಜತೆ ಸುಶ್ಮಿತಾ ಸೇನ್ ದೋಣಿ ವಿಹಾರ: ಪೋಟೋ ವೈರಲ್

ನವದೆಹಲಿ: ಮಾಜಿ ಭುವನ ಸುಂದರಿ ಸುಶ್ಮಿತಾ ಸೇನ್ ತಮ್ಮ ಗೆಳೆಯ ಮಾಡೆಲ್ ರೋಹ್ಮಾನ್ ಜತೆಗೆ ದೋಣಿ ವಿಹಾರದಲ್ಲಿ ಕಳೆದ ಸಂತೋಷದ ಕ್ಷಣವನ್ನು ತಮ್ಮ ಇನ್ಸ್ ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಇದೀಗ  ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಫೋಟೋದಲ್ಲಿ ಸುಶ್ಮಿತಾ ಬಿಕಿನಿಯಲ್ಲಿ ತುಂಬಾನೇ ಹಾಟ್ ಆಗಿ ಕಾಣಿಸಿಕೊಂಡಿದ್ದು, ಇಬ್ಬರು ರೋಮ್ಯಾಂಟಿಕ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ರೋಹ್ಮಾನ್ ದೇಹಕ್ಕೆ ಒರಗಿ ಕುಳಿತಿರುವ ಸುಶ್ಮಿತಾ ದೋಣಿ ವಿಹಾರದಲ್ಲಿ ತಮ್ಮ ಗೆಳೆಯನ ಜತೆ ಕಳೆದ ಸಂತೋಷದ ಕ್ಷಣವನ್ನು ಫೋಟೋ ಹಂಚಿಕೊಳ್ಳುವ ಮೂಲಕ ತಿಳಿಸಿದ್ದಾರೆ.   

ಈ ಫೋಟೋಗಳಿಗೆ ಇನ್ಸ್ ಸ್ಟಾಗ್ರಾಂನಲ್ಲಿ 2ಲಕ್ಷಕ್ಕೂ ಅಧಿಕ ಲೈಕ್ ಗಳು ಬಂದಿವೆ.

ಮಾಜಿ ಭುವನ ಸುಂದರಿ ಸುಶ್ಮಿತಾ ಸೇನ್ ತಮ್ಮ ಅಭಿನಯದ ಮೂಲಕ ತಮ್ಮದೇ ಆದ ಸ್ಥಾನವನ್ನು ಪಡೆದುಕೊಂಡಿದ್ದು, ವೈಯ್ಯಕ್ತಿಕ ಜೀವನದಲ್ಲಿ ತಮ್ಮ ಸಂಬಂಧಗಳಿಂದಾಗಿ ಸುದ್ದಿಯಾಗುತ್ತಿದ್ದಾರೆ.

ಇದೀಗ ತನಗಿಂತ 14ವರ್ಷ ಚಿಕ್ಕವನಾಗಿರುವ ಮಾಡೆಲ್ ರೋಹ್ಮಾನ್ ಅವರ ಜತೆಗೆ ಸುಶ್ಮಿತಾ ಡೇಟಿಂಗ್ ನಲ್ಲಿದ್ದಾರೆ ಎಂಬುದು ಸುದ್ದಿ. ಸುಶ್ಮಿತಾ ಕೂಡ ತಮ್ಮ ಇನ್ಸ್ ಸ್ಟಾಗ್ರಾಂನಲ್ಲಿ ರೋಹ್ಮಾನ್ ಜತೆಗೆ ಕಳೆದ ರೋಮ್ಯಾಂಟಿಕ್ ಕ್ಷಣಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಇವರಿಬ್ಬರು ಹಸೆಮಣೆಯೇರಲಿದ್ದಾರೆ ಎಂಬುದು ಸುದ್ದಿ.

 

 

More Images