ನಾಳೆಯಿಂದ ಈ ದೃಶ್ಯ ಇರುವುದಿಲ್ಲ; ಪೊಗರು ಚಿತ್ರದ ನಿರ್ದೇಶಕ ಸೂರಪ್ಪ ಬಾಬು

ನಾಳೆಯಿಂದ ಈ ದೃಶ್ಯ ಇರುವುದಿಲ್ಲ; ಪೊಗರು ಚಿತ್ರದ ನಿರ್ದೇಶಕ ಸೂರಪ್ಪ ಬಾಬು

MS   ¦    Feb 23, 2021 05:31:36 PM (IST)
ನಾಳೆಯಿಂದ ಈ ದೃಶ್ಯ ಇರುವುದಿಲ್ಲ; ಪೊಗರು ಚಿತ್ರದ ನಿರ್ದೇಶಕ ಸೂರಪ್ಪ ಬಾಬು

ಬೆಂಗಳೂರು : ಒಂದೆರಡು ದಿನಗಳಿಂದ ಕೇಳಿಬರುತ್ತಿರುವ ಪೊಗರು ಚಿತ್ರದ ವಿರುದ್ಧದ ಆರೋಪಗಳ ಸಂಬಂಧಿಸಿದಂತೆ ಪೊಗರು ಚಿತ್ರದ ನಿರ್ದೇಶಕ ಸೂರಪ್ಪ ಬಾಬು ಪ್ರತಿಕ್ರಿಯಿಸಿದ್ದಾರೆ.

ಪೊಗರು ಚಿತ್ರದಲ್ಲಿ ಬ್ರಾಹ್ಮಣ ಸಮುದಾಯವನ್ನು ಅವಹೇಳನ ಮಾಡಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ನಿರ್ದೇಶಕ ಮಾತನಾಡಿದ್ದು, ಚಿತ್ರದಲ್ಲಿ ಈ ಆಕ್ಷೇಪಾರ್ಹ ಭಾಗ ತೆಗೆದುಹಾಕಲಾಗುವುದು. ತಾಂತ್ರಿಕ ಸಮಸ್ಯೆಯಿಂದ ಇದು ವಿಳಂಬವಾಗಿದೆ . ನಾಳೆಯಿಂದ ಈ ದೃಶ್ಯ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ .

ಇನ್ನೊಂದೆಡೆ, ಇಂದು ಬೆಂಗಳೂರಿನಲ್ಲಿ ಚಿತ್ರದಲ್ಲಿ ಬ್ರಾಹ್ಮಣ ಸಮುದಾಯವನ್ನು ಅವಹೇಳನಮಾಡಲಾಗಿದೆ ಎಂದು ಆರೋಪಿಸಿ ಬೃಹತ್ ಪ್ರತಿಭಟನೆ ನಡೆಸಲಾಗಿತ್ತು.