ಜಯಾ ಬಚ್ಚನ್ ಗೆ ತೀಕ್ಷ್ಣ ಪ್ರಶ್ನೆ ಕೇಳಿದ ಕಂಗನಾ

ಜಯಾ ಬಚ್ಚನ್ ಗೆ ತೀಕ್ಷ್ಣ ಪ್ರಶ್ನೆ ಕೇಳಿದ ಕಂಗನಾ

HSA   ¦    Sep 15, 2020 02:04:57 PM (IST)
ಜಯಾ ಬಚ್ಚನ್ ಗೆ ತೀಕ್ಷ್ಣ ಪ್ರಶ್ನೆ ಕೇಳಿದ ಕಂಗನಾ

ನವದೆಹಲಿ: ಬಾಲಿವುಡ್ ನಟ ಕಂಗನಾ ರಣವತ್ ಈಗ ಅಮಿತಾಬ್ ಬಚ್ಚನ್ ಅವರ ಪತ್ನಿ ಜಯಾ ಬಚ್ಚನ್ ಗೆ ತೀಕ್ಷ್ಣ ಪ್ರಶ್ನೆ ಕೇಳಿ ಟ್ವೀಟ್ ಮಾಡಿರುವರು.

ಸಂಸತ್ತಿನಲ್ಲಿ ಕೂಡ ಬಾಲಿವುಡ್ ನ ಡ್ರಗ್ಸ್ ವಿಚಾರದ ಬಗ್ಗೆ ಚರ್ಚೆ ನಡೆಯುತ್ತಿದ್ದು, ಈ ವೇಳೆ ಬಿಜೆಪಿ ಸಂಸದ ರವಿಕಿಶನ್ ಅವರು ಸಿನಿಮಾ ಕ್ಷೇತ್ರದಲ್ಲಿ ಡ್ರಗ್ಸ್ ಚಟ ಇದೆ ಎಂದು ಸೋಮವಾರ ಹೇಳಿದ್ದರು.

ಇಂದು ಸಂಸತ್ತಿನಲ್ಲಿ ಮಾತನಾಡಿರುವ ರಾಜ್ಯಸಭಾ ಸದಸ್ಯೆ ಜಯಾ ಬಚ್ಚನ್ ಅವರು, ಯಾರನ್ನೂ ಉಲ್ಲೇಖಿಸದೆ ತಮಗೆ ತುತ್ತು ನೀಡುತ್ತಿರುವ ಕೈಗಳನ್ನೇ ಅವರು ಕಚ್ಚುತ್ತಿದ್ದಾರೆ ಎಂದಿದ್ದಾರೆ.

ಇದಕ್ಕೆ ಟೀಕೆ ಮಾಡಿರುವ ಕಂಗನಾ, ನಿಮ್ಮ ಮಗಳ ಶ್ವೇತಾ ಹದಿಹರೆಯದಲ್ಲಿ ಮಾದಕ ವ್ಯಸನಿಯಾಗಿ, ಮಗ ಅಭಿಷೇಕ್ ಕಿರುಕುಳದ ಹಾಗೂ ಬೆದರಿಕೆ ಬಗ್ಗೆ ಮಾತನಾಡುತ್ತಿದ್ದರೆ, ಆಗ ಕೂಡ ನೀವು ಇದನ್ನೇ ಹೇಳುತ್ತಿದ್ದೀರಾ ಎಂದು ಟ್ವೀಟ್ ಮೂಲಕ ಪ್ರಶ್ನೆ ಮಾಡಿರುವರು.