ಅಮರ್ ಆಳ್ವ ಪಾತ್ರಕ್ಕೆ ರಿಷಬ್ ಶೆಟ್ಟಿ?

ಅಮರ್ ಆಳ್ವ ಪಾತ್ರಕ್ಕೆ ರಿಷಬ್ ಶೆಟ್ಟಿ?

HSA   ¦    Jun 01, 2020 02:22:40 PM (IST)
ಅಮರ್ ಆಳ್ವ ಪಾತ್ರಕ್ಕೆ ರಿಷಬ್ ಶೆಟ್ಟಿ?

ಬೆಂಗಳೂರು: ಒಂದು ಕಾಲದಲ್ಲಿ ಕರ್ನಾಟಕದ ಭೂಗತ ಜಗತ್ತನ್ನು ಆಳಿದ್ದ ಅಮರ್ ಆಳ್ವ ಪಾತ್ರವನ್ನು ರಿಷಭ್ ಶೆಟ್ಟಿ ನಿರ್ವಹಿಸಲಿದ್ದಾರೆ ಎಂದು ತಿಳಿದುಬಂದಿದೆ.

1990ರ ಕಾಲದಲ್ಲಿ ಮಂಗಳೂರಿನಿಂದಲೇ ಕರ್ನಾಟಕದ ಭೂಗತ ಜಗತ್ತನ್ನು ಆಳಿದ್ದ ಅಮರ್ ಆಳ್ವನನ್ನು 1992 ಜುಲೈ 14ರಂದು ಮಂಗಳೂರು ಮಿಲಾಗ್ರಿಸ್ ಚರ್ಚ್ ನ ಮುಂಭಾಗದಲ್ಲಿ ಹತ್ಯೆ ಮಾಡಲಾಗಿತ್ತು.

ಈ ಹತ್ಯೆಯಲ್ಲಿ ಮುತ್ತಪ್ಪ ರೈ ಕೈವಾಡವೂ ಇತ್ತು ಎಂದು ಹೇಳಲಾಗಿತ್ತು. ಆದರೆ ಇದುವರೆಗೆ ಇದು ಸಾಬೀತಾಗಿಲ್ಲ. ಆಳ್ವ ಕೊಲೆಯಲ್ಲಿ ಭಾಗಿಯಾಗಿದ್ದ ಪ್ರಮುಖ ಆರೋಪಿ ಅಶೋಕ್ ಶೆಟ್ಟಿ ಎಂಬಾತನ ಮೇಲೆ ಟಾಡಾ ಹಾಕಲಾಗಿತ್ತು. ಆದರೆ ಕೋರ್ಟ್ ಇದನ್ನು ತೆಗೆದುಹಾಕಿತ್ತು. ಈ ಪ್ರಕರಣದ 8 ಮಂದಿ ಆರೋಪಿಗಳನ್ನು ಕೋರ್ಟ್ ಖುಲಾಸೆಗೊಳಿಸಿತ್ತು.

ರಿಷಭ್ ಶೆಟ್ಟಿ ಈ ಪಾತ್ರವನ್ನು ನಿರ್ವಹಿಸಲಿದ್ದಾರೆ ಎಂದು ತಿಳಿದುಬಂದಿದೆ. ಲಾಕ್ ಡೌನ್ ಸಂದರ್ಭದಲ್ಲಿ ಇದರ ಸ್ಕ್ರೀನ್ ಪ್ಲೇ ತಯಾರಿಸಲಾಗಿದೆ.