ಕೆಜಿಎಫ್ ಚಾಪ್ಟರ್ 2 ವಿರುದ್ಧ ನೋಟಿಸ್ ಜಾರಿ ಮಾಡಿದ ಆರೋಗ್ಯ ಇಲಾಖೆ

ಕೆಜಿಎಫ್ ಚಾಪ್ಟರ್ 2 ವಿರುದ್ಧ ನೋಟಿಸ್ ಜಾರಿ ಮಾಡಿದ ಆರೋಗ್ಯ ಇಲಾಖೆ

MS   ¦    Jan 13, 2021 06:01:15 PM (IST)
ಕೆಜಿಎಫ್ ಚಾಪ್ಟರ್ 2 ವಿರುದ್ಧ ನೋಟಿಸ್ ಜಾರಿ ಮಾಡಿದ ಆರೋಗ್ಯ ಇಲಾಖೆ

ಬೆಂಗಳೂರು: ಭಾರತೀಯ ಸಿನಿರಂಗದಲ್ಲಿ ಬಹುದೊಡ್ಡ ಸುದ್ದಿ ಮಾಡಿರುವ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ದಾಖಲೆಗಳನ್ನು ಬರೆದಿರುವ ಕೆಜಿಎಫ್ ಚಾಪ್ಟರ್ 2 ಆರೋಗ್ಯ ಇಲಾಖೆ ಆಕ್ಷೇಪ ವ್ಯಕ್ತಪಡಿಸಿ ನೋಟಿಸ್ ಜಾರಿ ಮಾಡಿದೆ.

ಟೀಸರ್ ನಲ್ಲಿ ತೋರಿಸಿರುವ ಧೂಮಪಾನವನ್ನು ಮಾಡುವಂತಹ ದೃಶ್ಯ ಪ್ರಚೋದನಕಾರಿ ಆಗಿದೆ. ಇದು ಸಮಾಜದ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ ಎಂದು ಆರೋಗ್ಯ ಇಲಾಖೆ ಆರೋಪಿಸಿದೆ. 

ನಟ ಯಶ್ ವಿರುದ್ಧ ಜಾರಿ ಮಾಡಲಾದ ನೋಟಿಸ್ ನಲ್ಲಿ ಅವರು ಲಕ್ಷಾಂತರ ಅಭಿಮಾನಿಗಳನ್ನು ಹೊಂದಿದ್ದಾರೆ. ಈ ದೃಶ್ಯ ಅವರ ಮೇಲೆ ಕೆಟ್ಟ ಪರಿಣಾಮ ಬೀರಲಿದೆ ಎಂದು ಹೇಳಲಾಗಿದೆ.