ಕೋವಿಡ್ ರೋಗಿಗಳಿಗೆ ಸಹಾಯ ಮಾಡಲು, ತನ್ನ ಫೇವರಿಟ್ ಬೈಕ್ಕನ್ನೆ ಮಾರಾಟಕ್ಕಿಟ್ಟ ನಟ

ಕೋವಿಡ್ ರೋಗಿಗಳಿಗೆ ಸಹಾಯ ಮಾಡಲು, ತನ್ನ ಫೇವರಿಟ್ ಬೈಕ್ಕನ್ನೆ ಮಾರಾಟಕ್ಕಿಟ್ಟ ನಟ

Jayashree Aryapu   ¦    May 03, 2021 04:59:58 PM (IST)
ಕೋವಿಡ್ ರೋಗಿಗಳಿಗೆ ಸಹಾಯ ಮಾಡಲು, ತನ್ನ ಫೇವರಿಟ್ ಬೈಕ್ಕನ್ನೆ ಮಾರಾಟಕ್ಕಿಟ್ಟ ನಟ

ಹೈದರಾಬಾದ್: ತೆಲುಗು ಚಿತ್ರರಂಗದ ಯುವ ನಟ ಹರ್ಷವರ್ಧನ್ ರಾಣೆ ಕೋವಿಡ್‌ ರೋಗಿಗಳ ಸಹಾಯಕ್ಕೆ ಮುಂದಾಗಿದ್ದಾರೆ. ತಮ್ಮ ಪ್ರೀತಿಯ ದುಬಾರಿ ಬೈಕನ್ನು ಮಾರಾಟಕ್ಕೆ ಇಟ್ಟಿದ್ದಾರೆ, ಅದರಿಂದ ಬರುವ ಹಣದಿಂದ ಸೋಂಕಿತರಿಗೆ ಆಕ್ಸಿಜನ್ ಕೊಡಿಸಲು ಮುಂದಾಗಿದ್ದಾರೆ.

'ಅಗತ್ಯ ಇರುವವರಿಗೆ ಆಮ್ಲಜನಕ ಸಾಂದ್ರಕಗಳನ್ನು ಖರೀದಿಸಲು ನನ್ನ ಬೈಕ್ ಮಾರಾಟ ಮಾಡುತ್ತಿದ್ದೇನೆ. ಹೈದರಾಬಾದ್‌ನಲ್ಲಿ ಉತ್ತಮ ಆಕ್ಸಿಜನ್ ಸಾಂದ್ರಕ ಎಲ್ಲಿ ಸಿಗುತ್ತೆ ಹೇಳಿ' ಎಂದು ಹರ್ಷವರ್ಧನ್ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

ಹರ್ಷವರ್ಧನ್‌ ಬೈಕ್‌ ಹಾಗೂ ಕಾರು ಕ್ರೇಜಿನ ಬಗ್ಗೆ ಎಲ್ಲರಿಗೂ ಗೊತ್ತಿದೆ. ಹೀಗಿರುವಾಗ ಬೈಕ್ ಮಾರುತ್ತಿದ್ದಾರೆ ಅಂದ್ರೆ ಜನರಿಗೆ ಸಹಾಯ ಮಾಡಬೇಕೆಂಬ ಮನಸ್ಸಿದೆ. ಕೋಟಿ ಕೋಟಿ ಸಂಪಾದನೆ ಮಾಡುವವರು ಮಾತ್ರ ಸಹಾಯ ಮಾಡುತ್ತಾರೆ ಎಂದುಕೊಳ್ಳಬೇಡಿ. ಇಂತಹ ಮಾನವೀಯತೆ ಕೆಲಸ ಮಾಡುವವರು ಇದ್ದಾರೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಹರ್ಷವರ್ಧನ್ ಪರವಾಗಿ ನೆಟ್ಟಿಗರು ಮಾತನಾಡಿದ್ದಾರೆ.