ರಾಮಾಯಣದ ಸುಗ್ರೀವ ಪಾತ್ರಧಾರಿ ಶ್ಯಾಮ್ ಸುಂದರ್ ಇನ್ನಿಲ್ಲ

ರಾಮಾಯಣದ ಸುಗ್ರೀವ ಪಾತ್ರಧಾರಿ ಶ್ಯಾಮ್ ಸುಂದರ್ ಇನ್ನಿಲ್ಲ

HSA   ¦    Apr 09, 2020 03:48:30 PM (IST)
ರಾಮಾಯಣದ ಸುಗ್ರೀವ ಪಾತ್ರಧಾರಿ ಶ್ಯಾಮ್ ಸುಂದರ್ ಇನ್ನಿಲ್ಲ

ನವದೆಹಲಿ: ದೂರದರ್ಶನದಲ್ಲಿ ಪ್ರಸಾರವಾಗುತ್ತಿದ್ದ ರಮಾನಂದ ಸಾಗರ್ ಅವರ ಜನಪ್ರಿಯ ಪೌರಾಣಿಕ ಧಾರಾವಾಹಿ ರಾಮಾಯಣದಲ್ಲಿ ಸುಗ್ರೀವನ ಪಾತ್ರ ಮಾಡಿದ್ದ ಶ್ಯಾಮ್ ಸುಂದರ್ ಕಲಾನಿ ಅವರು ಮಂಗಳವಾರ ನಿಧನರಾಗಿದ್ದಾರೆ.

ಈ ಬಗ್ಗೆ ನಟ ಅರುಣ್ ಗೋವಿಲ್ ಅವರು ಟ್ವಿಟ್ಟರ್ ನಲ್ಲಿ ಸಂತಾಪ ಸೂಚಿಸಿದ್ದಾರೆ. ರಾಮಾಯಣದಲ್ಲಿ ಶ್ಯಾಮ್ ಸುಂದರ್ ಅವರು ಸುಗ್ರೀಮ ಮತ್ತು ಬಾಲಿಯ ಪಾತ್ರ ಮಾಡಿದ್ದರು.

ಕ್ಯಾನ್ಸರ್ ನಿಂದ ಬಳಲುತ್ತಿದ್ದ ಶ್ಯಾಮ್ ಸುಂದರ್ ಅವರು ಏಪ್ರಿಲ್ 7ರಂದು ಕಲ್ಕಾದಲ್ಲಿ ನಿಧನರಾಗಿದ್ದಾರೆ.

ರಾಮಾಯಣದಲ್ಲಿ ಲಕ್ಷ್ಮಣನ ಪಾತ್ರ ಮಾಡಿದ ಸುನಿಲ್ ಲಹ್ರಿ ಅವರು ಕೂಡ ಸಂತಾಪ ಸೂಚಿಸಿದ್ದಾರೆ.