ಹಿರಿಯ ನಟ ಕೃಷ್ಣಮೂರ್ತಿ ನಾಡಿಗ್‌ ಇನ್ನಿಲ್ಲ

ಹಿರಿಯ ನಟ ಕೃಷ್ಣಮೂರ್ತಿ ನಾಡಿಗ್‌ ಇನ್ನಿಲ್ಲ

YK   ¦    Oct 18, 2020 03:57:23 PM (IST)
ಹಿರಿಯ ನಟ ಕೃಷ್ಣಮೂರ್ತಿ ನಾಡಿಗ್‌ ಇನ್ನಿಲ್ಲ

ಬೆಂಗಳೂರು: ಕನ್ನಡದ ಹಿರಿಯ ನಟ ಹಾಗೂ ಸಂಭಾಷಣೆಕಾರ ಕೃಷ್ಣಮೂರ್ತಿ ನಾಡಿಗ್‌ (67) ಹೃದಯಾಘಾತದಿಂದ ಶನಿವಾರ ರಾತ್ರಿ ನಿಧನರಾಗಿದ್ದಾರೆ.

ಶನಿವಾರ ಧಾರಾವಾಹಿಯ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದ ಅವರಿಗೆ ಎದೆನೋವು ಕಾಣಿಸಿಕೊಂಡಿತ್ತು. ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗಮಧ್ಯೆ ಕೊನೆಯುಸಿರೆಳೆದಿದ್ದಾರೆ.

ಅವರಿಗೆ ಪತ್ನಿ ಮತ್ತು ಇಬ್ಬರು ಪುತ್ರಿಯರು ಇದ್ದಾರೆ. ಶ್ರೀನಗರದಲ್ಲಿ ಪತ್ನಿಯೊಂದಿಗೆ ವಾಸವಾಗಿದ್ದರು. ಇಬ್ಬರೂ ಪುತ್ರಿಯರು ಅಮೆರಿಕದಲ್ಲಿ ನೆಲೆಸಿದ್ದಾರೆ. ಚಾಮರಾಜಪೇಟೆಯ ಚಿತಾಗಾರದಲ್ಲಿ ನಾಡಿಗ್ ಅವರ ಅಂತ್ಯಕ್ರಿಯೆ ಭಾನುವಾರ ನಡೆಯಲಿದೆ.

ನಾಲ್ಕು ದಶಕಗಳಿಗೂ ಹೆಚ್ಚು ಅವಧಿಯಿಂದ ಬಣ್ಣದ ಲೋಕದಲ್ಲಿ ತೊಡಗಿಸಿಕೊಂಡಿದ್ದ ಅವರು ನಟನೆಯ ಜತೆಗೆ ಕಥೆಗಾರ ಮತ್ತು ಸಂಭಾಷಣೆಕಾರನಾಗಿಯೂ ಗುರುತಿಸಿಕೊಂಡಿದ್ದರು. ಸುಮಾರು 60ಕ್ಕೂ ಸಿನಿಮಾಗಳಿಗೆ ಅವರು ಸಂಭಾಷಣೆ ಬರೆದಿದ್ದಾರೆ.