ಮೈಸೂರು: ದುರ್ಗಾ ಧಾರಾವಾಹಿ ಆರಂಭದ ಹಿನ್ನಲೆಯಲ್ಲಿ ಸಮಸ್ತ ಸುವರ್ಣ ಪರಿವಾರದೊಂದಿಗೆ ಮೈಸೂರಿನ ಮಹಾರಾಜಾ ಕಾಲೇಜು ಮೈದಾನದಲ್ಲಿ ಕಾರ್ಯಕ್ರಮ ನಡೆಯಿತು.
ಈಗಾಗಲೇ ವೀಕ್ಷಕರ ಮನೆಮಾತಾಗಿರುವ ಅಮೃತವರ್ಷಿಣಿ, ಮಿಲನ, ಅವನು ಮತ್ತು ಶ್ರಾವಣಿ, ಖುಷಿ ಮತ್ತು ಅನುರೂಪ ಧಾರವಾಹಿಗಳ ಮುಖ್ಯ ಪಾತ್ರಧಾರಿಗಳು ವಿಭಿನ್ನ ರೀತಿಯ ಮನೋರಂಜನಾ ಕಾರ್ಯಕ್ರಮಗಳನ್ನು ನೀಡಿ ಈ ದುರ್ಗಾ ಪ್ರವೇಶಕ್ಕೆ ಸಾಕ್ಷಿಯಾದರು.
ದುರ್ಗಾ ದೇವತೆಯ ಐಗಿರಿ ನಂದಿನಿ ನಂದಿತ ಮೇದಿನಿ ಸ್ತುತಿಗೆ ಸುವರ್ಣ ವಾಹಿನಿಯ ಎಲ್ಲ ನಟಿಯರು ಹೆಜ್ಜೆ ಹಾಕಿದ ಕ್ಷಣ ಎಲ್ಲರನ್ನು ಮಂತ್ರ ಮುಗ್ಧರನ್ನಾಗಿ ಮಾಡಿದೆ. ಅಲ್ಲದೇ ದುರ್ಗಾ ನಾಯಕಿಯನ್ನು ಪಲ್ಲಕ್ಕಿಯಲ್ಲಿ ಕರೆತಂದು ಎಲ್ಲ ನಟಿಯರು ಬಾಗಿನ ಕೊಟ್ಟು ಪರಿವಾರಕ್ಕೆ ಬರಮಾಡಿಕೊಂಡಿರುವ ರೀತಿ ತುಂಬಾ ಅವಿಸ್ಮರಣೀಯ. ನಿರಂಜನ್ ಮತ್ತು ಕಾವ್ಯಾ ಶಾ ಅವರ ಮಾತುಗಳು ಈ ಕಾರ್ಯಕ್ರಮದಲ್ಲಿ ಚೆನ್ನಾಗಿ ಮೂಡಿಬಂದಿದೆ. ಮೈಸೂರಿನಲ್ಲಿ ನಡೆದ ದುರ್ಗಾ ಪ್ರವೇಶ ಕಾರ್ಯಕ್ರಮ ಡಿಸೆಂಬರ್ 6ರಂದು ಸಂಜೆ 4ರಿಂದ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಲಿದೆ.