ಮಂಗಳೂರು: ಯೋಧ ಮೋಷನ್ ಪಿಕ್ಚರ್ಸ್ ಲಾಂಛನದಲ್ಲಿ ಸೂರ್ಯ ಮೆನನ್ ನಿರ್ದೇಶನದಲ್ಲಿ ರಂಜನ್ ಶೆಟ್ಟಿ ಸೂರ್ಯಮೆನನ್ ನಿರ್ಮಾಣದಲ್ಲಿ ತಯಾರಾದ ಕುಡ್ಲಕೆಫೆ ತುಳುಚಲನ ಚಿತ್ರವು ಫೆಬ್ರವರಿ 12ರಂದು ಕರಾವಳಿ ಜಿಲ್ಲೆಯಾದ್ಯಂತ ಏಕಕಾಲದಲ್ಲಿ ತೆರೆಕಾಣಲಿದೆ.
ಸಿನಿಮಾಕ್ಕೆ ಮಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆದಿದ್ದು, ಸಿನಿಮಾದಲ್ಲಿ ಮೂರು ಹಾಡುಗಳಿವೆ. ಪ್ರಥಮ ಬಾರಿಗೆ ತುಳು ಸಿನಿಮಾದಲ್ಲಿ ಕಬಡ್ಡಿ ಕ್ರೀಡೆಯ ಕುರಿತು ಕಥೆಯನ್ನು ಅಳವಡಿಸಲಾಗಿದೆ. ಈ ಸಿನಿಮಾದಲ್ಲಿ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಗಮನ ಸೆಳೆದ ಕಬಡ್ಡಿ ಆಟಗಾರರು ಅಭಿನಯಿಸಿರುವುದು ಸಿನಿಮಾದ ವಿಶೇಷತೆಯಾಗಿದೆ.
ಸಿನಿಮಾ ಬಿಡುಗಡೆಯ ಮುನ್ನವೇ ಕುಡ್ಲಕೆಫೆ ಬೆಂಗಳೂರಿನಲ್ಲಿ ನಡೆಯುತ್ತಿರುವ ಅಂತರ್ರಾಷ್ಟ್ರೀಯ ಸಿನಿಮೋತ್ಸವದ ಅತಿಥಿಗಳ ವಿಶೇಷ ಪ್ರದರ್ಶನ ವಿಭಾಗಕ್ಕೆ ಈ ಸಿನಿಮಾ ಆಯ್ಕೆಯಾಗಿದೆ. ತಾರಾಗಣದಲ್ಲಿ ಜ್ಯೋತಿಷ್ ಶೆಟ್ಟಿ, ಕುಸೇಲ್ದರಸೆ ನವೀನ್ ಡಿ. ಪಡೀಲ್, ರಘು ಪಾಂಡೇಶ್ವರ್, ಆಹಾನ ಕುಂಬ, ಶೈನ್ ಶೆಟ್ಟಿ, ಸಂತೋಷ್ ಶೆಟ್ಟಿ, ಸುಧೀರ್ ರಾಜ್ ಉರ್ವಾ, ಅಶೋಕ್ ಶೆಟ್ಟಿ ಅಂಬ್ಲಮೊಗರು, ಕಿಶೋರ್ ಕೊಟ್ಟಾರಿ, ಸನಾಮ್ ಅಮೀನ್, ಕಾರ್ತಿಕ್ ಕೊಟ್ಟಾರಿ, ಸೂರಜ್ ಸನಿಲ್, ಮನೋಜ್ ಪುತ್ತೂರು, ಅನುಶ ಕೋಟ್ಯಾನ್, ಶಶಿರಾಜ್ ರಾವ್ ಕಾವೂರು, ಭವಾನಿ ಶಂಕರ್, ಜಯರಾಮ ಆಚಾರ್ಯ ಬಂಟ್ವಾಳ್, ತಿಮ್ಮಪ್ಪ ಕುಲಾಲ್, ನವೀನ್ ಶೆಟ್ಟಿ ಮಿಜಾರ್ ಮೊದಲಾದವರು ಅಭಿನಯಿಸಿದ್ದಾರೆ.
ಈ ಸಿನಿಮಾವನ್ನು ರಂಜನ್ ಶೆಟ್ಟಿ ಮತ್ತು ಸೂರ್ಯಮೆನನ್ ನಿರ್ಮಿಸಿದ್ದಾರೆ. ಸಹ ನಿರ್ಮಾಪಕರು ಶಿವಶಂಕರ್ ಮೆನನ್, ಕ್ರಿಯೇಟಿವ್ ಪ್ರೊಡ್ಯುಸರ್: ಕುಡ್ಲ ಸಾಯಿಕೃಷ್ಣ, ಛಾಯಾಗ್ರಹಣ: ಸಲೀಲ್ ಪಾಠಕ್, ಸಂಗೀತ ದರ್ಶನ್ ಉಮಂಗ್ ಮತ್ತು ಆಕಾಶ್ ಪ್ರಜಾಪತಿ, ಸಂಕಲನ: ಅಕ್ಷಯ ಮೆಹ್ತಾ, ಸಾಹಿತ್ಯ: ಶಶಿರಾಜ್ ರಾವ್ ಕಾವೂರು.