ಮೈಸೂರು: ವಿಶ್ವ ವಿಖ್ಯಾತ ಅಂಬಾ ವಿಲಾಸ ಅರಮನೆ ವಿದ್ಯುತ್ ಬೆಳಕಿನಲ್ಲಿ ನಡೆದ 8 ನೇ ಅಂತರಾಷ್ಟ್ರೀಯ ಚಲನಚಿತ್ರೋತ್ಸವದ ಸಮಾರೋಪ ಸಮಾರಂಭದಲ್ಲಿ ಹಲವು ಹಿರಿಯ ಕಲಾವಿದರ ಸಮಾಗಮವಾಗು ಮೂಲಕ ಚಲಚಿತ್ರದ ವಿವಿಧ ಭಾಗದಲ್ಲಿ ಪ್ರಶಸ್ತಿ ಪಡೆದ 18 ಮಂದಿ ಸಾಧಕರಿಗೆ ಸಿಎಂ ಸಿದ್ಧರಾಮಯ್ಯ ಪ್ರಶಸ್ತಿ ನೀಡಿ ಗೌರವಿಸಿದರು.
ಅಂತಾರಾಷ್ಟ್ರೀಯ ಚಲನಚಿತ್ರೋವದ ಸಮಾರೋಪ ಸಮಾರಂಭದಲ್ಲಿ ಹಿರಿಯ ನಟರಾದ ಅಂಬರೀಶ್, ರಮೇಶ್ ಅರವಿಂದ್, ಶ್ರೀನಗರ ಕಿಟ್ಟಿ, ಗಣೇಶ್ ಹಾಗೂ ನಟಿಯಾರ ಭಾರತಿ ವಿಷ್ಣುವರ್ಧನ್, ಜಯಮಾಲ, ಸರೋಜದೇವಿ ಸೇರಿದಂತೆ ಹಲವು ಮಂದಿ ಉಪಸ್ಥಿತರಿದ್ದರು. ಚಲನಚಿತ್ರ ನಿರ್ಮಾಪಕರಾದ ರಾಕ್ಲೈನ್ ವೆಂಕಟೇಶ್ ಮುಂತಾದ ಚಲನಚಿತ್ರದ ವಾಣಿಜ್ಯ ಮಂಡಳಿಯ ಸದಸ್ಯರು, ನಟ-ನಟಿಯರು ಭಾಗವಹಿಸಿದ್ದರು.
ಏಷಿಯನ್ ಸಿನಿಮಾ, ಭಾರತೀಯ ಸಿನಿಮಾ ಹಾಗೂ ಕನ್ನಡ ಸಿನಿಮಾ ಎಂಬ ಮೂರು ವಿಭಾಗದಲ್ಲಿ 18 ಮಂದಿ ಸಾಧಕರಿಗೆ ಪ್ರಶಸ್ತಿಯನ್ನು ನೀಡಿದ ಸಿಎಂ ಸಿದ್ಧರಾಮಯ್ಯ ಮಾತನಾಡಿ ಏಕಕಾಲದಲ್ಲಿ ಮೈಸೂರು-ಬೆಂಗಳೂರಿನಲ್ಲಿ ನಡೆದ ಮೊದಲ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಇದಾಗಿದ್ದು, ಇದೊಂದು ದಾಖಲೆಯಾಗಿದೆ ಮುಂದಿನ ವರ್ಷ ಇನ್ನೂ ಅದ್ಧೂರಿಯಾಗಿ ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವ ನಡೆಸಲಾಗುವುದೆಂದು ಇದೇ ಸಂದರ್ಭದಲ್ಲಿ ತಿಳಿಸಿದರು.
ಇದೇ ಸಂದರ್ಭದಲ್ಲಿ ಕನ್ನಡ ವಾಣಿಜ್ಯ ಮಂಡಳಿಗೆ ಸರ್ಕಾರಿದಿಂದ ನಾನಾ ರೀತಿಯ ಯೋಜನೆಗಳನ್ನು ಜಾರಿಗೊಳಿಸಿದ ಸಿಎಂ ಸಿದ್ದರಾಮಯ್ಯ ಹಾಗೂ ವಸತಿ ಸಚಿವ ಅಂಬರೀಶ್ ಅವರಿಗೆ ಇಡೀ ಚಿತ್ರತಂಡ ಹಾಗೂ ವಾಣಿಜ್ಯ ಮಂಡಳಿ ಬೃಹತ್ ಗಾತ್ರದ ಹಾರವನ್ನು ಹಾಕಿ ಸನ್ಮಾನಿಸಿದ್ದು ಎಲ್ಲರ ಗಮನ ಸೆಳೆಯಿತು.