News Kannada

ಮನರಂಜನೆ

ಗೋಧಿ ಬಣ್ಣ, ಸಾಧಾರಣ ಮೈಕಟ್ಟಿನ ವ್ಯಕ್ತಿ ಕಾಣೆಯಾಗಿದ್ದಾರೆ - 1 min read

ಗೋಧಿ ಬಣ್ಣ, ಸಾಧಾರಣ ಮೈಕಟ್ಟಿನ ವ್ಯಕ್ತಿ ಕಾಣೆಯಾಗಿದ್ದಾರೆ

ಕನ್ನಡ ಚಿತ್ರರಂಗದಲ್ಲಿ ಕ್ರಿಯಾಶೀಲತೆಯ ಸುನಾಮಿ ಎದ್ದಿದೆ ಎನ್ನುವುದಕ್ಕೆ ಮತ್ತೊಂದು ತಾಜಾ ಸಾಕ್ಷಿ “ಗೋಧಿ ಬಣ್ಣ, ಸಾಧಾರಣ ಮೈಕಟ್ಟು” ಚಿತ್ರ. ಹಿರಿಯ ನಟ, ನಿರ್ದೇಶಕರ ಡಾರ್ಲಿಂಗ್ ಅನಂತ್ ನಾಗ್ ಅವರು ಪ್ರಮುಖ ಪಾತ್ರದಲ್ಲಿ ಅಂದರೆ ಸ್ಕಿಜೋಫ್ರಿನಿಯಾ ರೋಗಿಯ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಮಿಕ್ಕಂತೆ ರಕ್ಷಿತ್ ಶೆಟ್ಟಿ ಮತ್ತು ಶ್ರುತಿ ಹರಿಹರನ್ ಕಾಣೆಯಾದ ಅನಂತ್ ನಾಗ್ ಅವರ ಹುಡುಕಾಟದಲ್ಲಿ ತೊಡಗಿದ್ದಾರೆ. ಇತ್ತೀಚೆಗೆ ನಾಯಕ ಮತ್ತು ನಾಯಕಿಯ ಪಾತ್ರ ಪರಿಚಯವಿರುವ ವಿಡೀಯೋ ತುಣುಕುಗಳನ್ನು ಸಾಮಾಜಿಕ ಜಾಲತಾಣದಲ್ಲಿ ರಿಲೀಸ್ ಮಾಡಿರುವ ಚಿತ್ರತಂಡ ಸ್ಯಾಂಡಲ್ ವುಡ್ ನಲ್ಲಿ ಮತ್ತೊಂದು ಹೊಸ ಅಲೆಯನ್ನು ಸೃಷ್ಟಿಸುವ ಭರವಸೆಯನ್ನು ನೀಡಿದೆ.


 “ಗೋಧಿ ಬಣ್ಣ, ಸಾಧಾರಣ ಮೈಕಟ್ಟಿ”ನ ಕಾಣೆಯಾದ ವ್ಯಕ್ತಿ ನಿಮಗೆ ಸಿಕ್ಕಲ್ಲಿ ದಯವಿಟ್ಟು ಈ ಕೆಳಗಿನ ವ್ಯಕ್ತಿಗಳನ್ನು ಸಂಪರ್ಕಿಸಿ.ಹೇಮಂತ್ ರಾವ್ ನಿರ್ದೇಶಕರು, ಪುಷ್ಕರ್ ಮಲ್ಲಿಕಾರ್ಜುನಯ್ಯ ನಿರ್ಮಾಪಕರು, ನಂದಕಿಶೋರ್ ಕ್ಯಾಮೆರಾಮೆನ್, ಚರಣ್ ರಾಜ್ ಸಂಗೀತ ನಿರ್ದೇಶಕರು, ಶ್ರೀಕಾಂತ್ ಸಂಕಲನಕಾರರು. ವರುಷಗಳಿಂದ ಚಿತ್ರೀಕರಣವಾಗುತ್ತಿರುವ “ಗೋಧಿ ಬಣ್ಣ, ಸಾಧಾರಣ ಮೈಕಟ್ಟಿ”ನ ವ್ಯಕ್ತಿ ಅಂದುಕೊಂಡಂತೆ ಆದರೆ ಇನ್ನೊಂದೆರಡು ತಿಂಗಳೊಳಗೆ ಪ್ರೇಕ್ಷಕ ಪ್ರಭುವಿನ ಮುಂದೆ ಕಟಕಟೆಯಲ್ಲಿ ನಿಲ್ಲಲಿದ್ದಾನೆ.

See also  ಕ್ಯಾನ್ಸರ್ ಗೆ ಚಿಕಿತ್ಸೆ ಪಡೆದು ಮುಂಬೈಗೆ ಮರಳಿದ ಸೋನಾಲಿ ಬೇಂದ್ರೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು