News Kannada
Thursday, July 07 2022

ಮನರಂಜನೆ

ಕರಿಚಿರತೆಯ ಕಾವಲಲ್ಲಿ “ಮಾಸ್ತಿಗುಡಿ” - 1 min read

Photo Credit :

ಕರಿಚಿರತೆಯ ಕಾವಲಲ್ಲಿ “ಮಾಸ್ತಿಗುಡಿ”

ದುನಿಯಾ ಚಿತ್ರದ ನಂತರ ವಿಜಯ್ ಅವರು ಸುಮಾರು ಚಿತ್ರಗಳಲ್ಲಿ ಹಲವಾರು ಪಾತ್ರಗಳಲ್ಲಿ ನಟಿಸಿದ್ದರೂ ದುನಿಯಾದ ಮೋಡಿ ಮತ್ತೆ ಮಾಡಿರಲಿಲ್ಲ. ವಿಜಯ್ ಅವರೂ ಮತ್ತೊಂದು ಬ್ಲಾಕ್ ಬಸ್ಟರ್ ಗಾಗಿ ಹರಸಾಹಸ ಪಟ್ಟಿದ್ದರು.

ಒಬ್ಬ ನಟನ ಒಂದು ಚಿತ್ರ ಗೆದ್ದ ಬಳಿಕ ಅದೇ ಮೈಲೇಜನ್ನು ಉಳಿಸೋದು ಬಹಳ ಕಷ್ಟ, ಆದರೆ ನಟನ ಅಭಿಮಾನಿಗಳ ನಿರೀಕ್ಷೆ ಮಾತ್ರ ಏರಿಕೆಯಾಗುತ್ತಾ ಇರುತ್ತದೆ. ದುನಿಯಾ ವಿಜಯ್, ಬ್ಲ್ಯಾಕ್ ಕೋಬ್ರಾ, ಕರಿಚಿರತೆ ಇತ್ಯಾದಿ ಉಪನಾಮಗಳಲ್ಲಿ ರಾರಾಜಿಸುವ ವಿಜಯ್ ಮತ್ತೊಂದು ಹಿಟ್ ಗಾಗಿ, ನೈಜ ಘಟನೆಯೊಂದಕ್ಕೆ ಸಿನಿಮೀಯ ಕಥೆ ಬರೆದು, ಅರಮನೆ, ಸಂಜು ವೆಡ್ಸ್ ಗೀತಾ ಮತ್ತು ಮೈನಾ ಚಿತ್ರಗಳ ನಿರ್ದೇಶಕ ಕಂ ಗೆಳೆಯ ನಾಗಶೇಖರ್ ಜೊತೆ ಹೊಸ ಚಿತ್ರ “ಮಾಸ್ತಿಗುಡಿ” ಗಾಗಿ ಕೈ ಜೋಡಿಸಿದ್ದಾರೆ.

ಈಗಾಗಲೇ ಚಿತ್ರದ ಪೋಸ್ಟರ್ ಗಳು ನೋಡುಗನಲ್ಲಿ ಅಪಾರವಾದ ನಿರೀಕ್ಷೆಯ ಬೀಜವನ್ನು ಬಿತ್ತಿಬಿಟ್ಟಿವೆ. ಈ ಚಿತ್ರದಲ್ಲಿ ವಿಜಯ್ ಮೂರು ವಯಸ್ಸಿನ, ವಿಭಿನ್ನವಾದ ಪಾತ್ರಗಳಲ್ಲಿ ನಟಿಸುತ್ತಿದ್ದು ತರುಣ ವಯಸ್ಸಿನ ಎರಡು ರೀತಿಯ ಪಾತ್ರಗಳಲ್ಲಿ ಇವರಿಗೆ ನಾಯಕಿಯಾಗಿ ಅಮೂಲ್ಯ ಮತ್ತು ಕೃತಿ ಕರಬಂಧ ಆಯ್ಕೆಯಾಗಿದೆ. ಸುಂದರ್.ಪಿ.ಗೌಡ್ರು ಮತ್ತು ಅನಿಲ್ ಕುಮಾರ್.ವಿ ಮಾಸ್ತಿಗುಡಿಯನ್ನು ನಿರ್ಮಿಸುತ್ತಿದ್ದಾರೆ. ಉಳಿದಂತೆ ತಾಂತ್ರಿಕ ವರ್ಗದಲ್ಲಿ ಸತ್ಯಹೆಗಡೆ ಕ್ಯಾಮೆರಾ, ಸಾಧುಕೋಕಿಲ ಸಂಗೀತ, ರವಿವರ್ಮ ಸಾಹಸ ಮತ್ತು ಜೋನಿಹರ್ಷ ಸಂಕಲನವಿದೆ. ಎಲ್ಲ ರೀತಿಯಲ್ಲೂ ಅದ್ಭುತವಾಗಿ ಕಾಣುವ ಮಾಸ್ತಿಗುಡಿ ಅಭಿಮಾನಿಗಳ ನಿರೀಕ್ಷೆಯನ್ನು ಉಳಿಸಿದ್ದಲ್ಲಿ ಮತ್ತೊಂದು ಬ್ಲಾಕ್ ಬಸ್ಟರ್ ಗ್ಯಾರಂಟಿ.
        

See also  ಮತ್ತೆ ಸಲ್ಮಾನ್ ಜತೆ ಐಶ್ವರ್ಯ ನಟಿಸುವರೇ?
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು