ಒಂದರ ಹಿಂದೆ ಒಂದರಂತೆ ಸಾಲು ಸಾಲು ಚಿತ್ರಗಳನ್ನು ಒಪ್ಪಿಕೊಂಡಿರುವ ಗೋಲ್ಡನ್ ಸ್ಟಾರ್, ಸ್ಟೈಲಿಶ್ ಕಥೆಗಳ ಕಡೆ ಮುಖ ಮಾಡಿದ್ದಾರೆ. “ಜೂಮ್” ಚಿತ್ರದಲ್ಲಿ ಗಣೇಶ್ ಅವರ ಗೆಟಪ್ ಗಳೇ ಚಿತ್ರದ ಕ್ವಾಲಿಟಿ ತೋರಿಸ್ತಾ ಇವೆ. ತಮ್ಮ ಚೊಚ್ಚಲ ನಿರ್ದೇಶನದಲ್ಲೇ “ಲವ್ ಗುರು” ಎಂಬ ಅದ್ಭುತ ಚಿತ್ರ ನೀಡಿದ ನಿರ್ದೇಶಕ ಪ್ರಶಾಂತ್ ರಾಜ್ “ಜೂಮ್” ಅನ್ನು ನಿರ್ದೇಶಿಸುತ್ತಿದ್ದಾರೆ.
ಗೋಲ್ಡನ್ ಸ್ಟಾರ್ ಗೆ ನಾಯಕಿಯಾಗಿ ರಾಧಿಕಾ ಪಂಡಿತ್ ಅಭಿನಯಿಸುತ್ತಿದ್ದು, ಈಗಾಗಲೇ ಬಿಡುಗಡೆಯಾಗಿರುವ ಚಿತ್ರದ ಟೀಸರ್ ಹೊಸತನದ ಮೇಕಿಂಗ್ ನಿಂದ ನೋಡುಗರನ್ನು ಸೆಳೆಯುತ್ತಿದೆ. ಚಿತ್ರದ ತಾಂತ್ರಿಕ ವರ್ಗದಲ್ಲಿ ತಮನ್.ಎಸ್.ಎಸ್ ಸಂಗೀತ, ಸಂತೋಷ್ ರೈ ಪಾತಾಜೆ ಕ್ಯಾಮೆರಾ ಮತ್ತು ಜೋ.ನಿ. ಹರ್ಷ ಅವರ ಸಂಕಲನವಿದೆ. ಎಲ್ಲಾ ಅಂದುಕೊಂಡಂತೆ ಆದರೆ ಶೀಘ್ರದಲ್ಲೇ ಗಣೇಶ್ ಅವರು ಫುಲ್ “ಜೂಮ್” ನಲ್ಲಿ ಮಿಂಚಲಿದ್ದಾರೆ.