ಬಾಕ್ಸಾಫೀಸ್ ನಲ್ಲಿ ತನ್ನದೇ ಹವಾ ಕ್ರಿಯೇಟ್ ಮಾಡಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್, ಪ್ರೇಕ್ಷಕರು ಶಿಳ್ಳೆ ಹೊಡೆಯುವಂಥ, ಅಭಿಮಾನಿಗಳು ಹುಚ್ಚೆದ್ದು ಕುಣಿಯುವಂಥ ಪಕ್ಕಾ ಕಮರ್ಷಿಯಲ್ ಚಿತ್ರಗಳನ್ನು ಅದ್ಧೂರಿಯಾಗಿ ಕಟ್ಟಿಕೊಟ್ಟವರು.
ಮೆಜೆಸ್ಟಿಕ್ ನಿಂದ ಶುರುವಾಗಿ ಮೊನ್ನೆ ಬಿಡುಗಡೆಯಾದ ವಿರಾಟ್ ವರೆಗೂ ಮಾಸ್ ಸ್ಟೈಲಲ್ಲೇ ಮಿಂಚಿರುವ ಚಾಲೆಂಜಿಂಗ್ ಸ್ಟಾರ್, ಮೊನ್ನೆ ತನ್ನ ಹುಟ್ಟುಹಬ್ಬದ ಸಂಭ್ರಮದಲ್ಲಿ ಹೊಸ ಚಿತ್ರ “ಚಕ್ರವರ್ತಿ”ಯನ್ನು ಒಪ್ಪಿಕೊಂಡಿದ್ದಾರೆ. ದರ್ಶನ್ ಅವರ ಹಲವಾರು ಸಿನೆಮಾಗಳಿಗೆ ಸಂಭಾಷಣೆ ಬರೆದಿರುವ ಚಿಂತನ್ ಎಂಬ ಯುವ ನಿರ್ದೇಶಕ ಚಕ್ರವರ್ತಿಯನ್ನು ನಿರ್ದೇಶಿಸಿದರೆ, ಸಾರಥಿ ಚಿತ್ರದ ನಿರ್ಮಾಪಕ ಸತ್ಯಪ್ರಕಾಶ್ ಅವರು ಚಕ್ರವರ್ತಿಯ ಬೆನ್ನೆಲುಬಾಗಿದ್ದಾರೆ. ಜಗ್ಗುದಾದ ಚಿತ್ರವನ್ನು ಮುಗಿಸಿರುವ ದರ್ಶನ್ ಅವರು ಚಕ್ರವರ್ತಿಯ ಚಿತ್ರೀಕರಣಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ವಿಭಿನ್ನ ಗೆಟಪ್ ಗಳಲ್ಲಿ ಅಂಬಾಸೆಡರ್ ಕಾರಿನ ಜೊತೆ ಚಾಲೆಂಜಿಂಗ್ ಸ್ಟಾರ್ ನಿಂತಿರುವ ಪೋಸ್ಟರ್ ಗಳು ಅಭಿಮಾನಿಗಳ ನರನಾಡಿಗಳಲ್ಲಿ ನಿರೀಕ್ಷೆಯ ವೈರಸನ್ನು ಹರಡಿಬಿಟ್ಟಿವೆ. ಚಿಂತನ್ ಅವರ ಪವರ್ ಫುಲ್ ಸಂಭಾಷಣೆಯಂತೆಯೇ ಚಕ್ರವರ್ತಿ ಮೂಡಿಬಂದರೆ ಬಾಕ್ಸಾಫೀಸ್ ಗೆ ಚಳಿಜ್ವರ ಹಿಡಿಯುವುದಂತೂ ಗ್ಯಾರಂಟಿ.