News Kannada
Sunday, October 02 2022

ಮನರಂಜನೆ

ಹೊಸಬರ ಅವತಾರ “ಪ್ರೇಮ ಗೀಮಾ ಜಾನೆ ದೋ” - 1 min read

Photo Credit :

ಹೊಸಬರ ಅವತಾರ “ಪ್ರೇಮ ಗೀಮಾ ಜಾನೆ ದೋ”

ಹೊಸತಾದ ವಿಭಿನ್ನವಾದ ಪ್ರೇಮಕತೆಯನ್ನು ಥ್ರಿಲ್ಲರ್ ಎಲಿಮೆಂಟ್ಸ್ ಗಳನ್ನು ಬೆರೆಸಿ ಸುಂದರವಾಗಿ ಹೇಳಹೊರಟಿದ್ದಾರೆ ನಿರ್ದೆಶಕ ಮಂಗಳೂರಿನ ಶಿರ್ವ ಮೂಲದ ಕೆಂಜಾ ಚೇತನ್ ಕುಮಾರ್.  ರಮ್ಯ ಮನೋಹರವಾದ ತಾಣಗಳಲ್ಲಿ ಚಿತ್ರೀಕರಿಸಿರುವ ಪ್ರೇಮ ಗೀಮ… ಈಗಾಗಲೇ ಬಿಡುಗಡೆಯಾಗಿರುವ ಟ್ರೇಲರ್ ನಿಂದ ನೋಡುಗರಲ್ಲಿ ಕುತೂಹಲವನ್ನು ಕೆರಳಿಸಿದೆ.


ನಿರ್ದೇಶನದ ಜೊತೆಯಲ್ಲಿ ಚಿತ್ರದ ಸಂಕಲನವನ್ನೂ ಸ್ವತಃ ತಾವೇ ಮಾಡಿರುವ ಚೇತನ್ ಕುಮಾರ್ ಅವರ ಕ್ರಿಯಾಶೀಲತೆಗೆ ಸಾಮಾಜಿಕ ಜಾಲತಾಣದಲ್ಲಿ ಪ್ರಶಂಸೆಗಳು ಹರಿದು ಬರುತ್ತಿವೆ. ಹೊರಿಜೋನ್ ಮೂವೀಸ್ ಸಂಸ್ಥೆ 25 ಜನ ನಿರ್ಮಾಪಕರಿಂದ ಕ್ರೌಡ್ ಫಂಡಿಂಗ್ ಮೂಲಕ ಚಿತ್ರವನ್ನು ನಿರ್ಮಾಣ ಮಾಡಿದೆ. ಪೂರ್ಣಚಂದ್ರ ತೇಜಸ್ವಿ ಸಂಗೀತವಿರುವ ಚಿತ್ರಕ್ಕೆ ಭಾಸ್ಕರ್, ಸುಕೃತ್ ಮತ್ತು ರುದ್ರಮುನಿ ಎಂಬವರು ಛಾಯಾಗ್ರಹಣ ಮಾಡಿದ್ದಾರೆ.

ಚಿತ್ರದಲ್ಲಿ ಗೌತಮ್, ಪಲ್ಲವಿ ಗೌಡ, ಶೃತಿ ತಿಮ್ಮಯ್ಯ, ರಮೇಶ್ ಭಟ್, ಪ್ರಶಾಂತ್ ಸಿದ್ದಿ, ರಾಕ್ ಲೈನ್ ಸುಧಾಕರ್, ಕಿಶನ್ ಸಿಂಗ್, ಸಂಗೀತ, ಅನಂತವೇಲು, ಮನ್ ದೀಪ್ ರಾಯ್ ಅಭಿನಯಿಸಿದ್ದಾರೆ. ಹೊಸ ಯೋಚನೆಗಳನ್ನು ಹೊತ್ತುಕೊಂಡು ಬರುತ್ತಿರುವ ಚಿತ್ರಕರ್ಮಿಗಳನ್ನು ಕನ್ನಡ ಪ್ರೇಕ್ಷಕ ಈವರೆಗೂ ನೋ ಅಂದಿಲ್ಲ. ಜೂನ್ ತಿಂಗಳಲ್ಲಿ ತೆರೆಗೆ ಬರಲು ಸಜ್ಜಾಗಿರುವ “ಪ್ರೇಮ ಗೀಮ…” ಚಿತ್ರಕ್ಕೆ ಕೆಂಪು ಹಾಸಿನ ಸ್ವಾಗತ ದೊರೆಯಲಿ, ಈ ಮೂಲಕ ಮತ್ತಷ್ಟು ಸದಭಿರುಚಿಯ ಹೊಸ ಚಿತ್ರಗಳು ಕನ್ನಡಕ್ಕೆ ದಕ್ಕುವಂತಾಗಲಿ.

See also  ಅಶ್ಲೀಲ ವಿಡಿಯೋ ಮಾಡಿ ಮಹಿಳೆಗೆ ಕಿರುಕುಳ: ಖಳನಟ ಧರ್ಮೇಂದ್ರ ವಿರುದ್ಧ ದೂರು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು