News Kannada
Saturday, October 08 2022

ಮನರಂಜನೆ

ಭಂಡಾರಿ ಬ್ರದರ್ಸ್ “ರಾಜರಥ” ಯಾತ್ರೆ - 1 min read

Photo Credit :

ಭಂಡಾರಿ ಬ್ರದರ್ಸ್ “ರಾಜರಥ” ಯಾತ್ರೆ

ಬೃಹತ್ ಬಾಹುಬಲಿಯೆದುರು ತೊಡೆತಟ್ಟಿ ನಿಂತು, ಬಿಡುಗಡೆಯಾದ ಎಲ್ಲಾ ಥಿಯೇಟರ್ ಗಳಲ್ಲೂ ಅಮೋಘ ಪ್ರದರ್ಶನಗೊಂಡು ಸ್ಯಾಂಡಲ್ ವುಡ್ ಮಾರುಕಟ್ಟೆಯನ್ನು ಸಪ್ತಸಾಗರದಾಚೆ ಕೊಂಡೊಯ್ದ ‘ರಂಗಿತರಂಗ’ ಚಿತ್ರತಂಡದ ಹೊಸ ಚಿತ್ರ “ರಾಜರಥ” ಈಗಾಗಲೇ ಅದ್ಧೂರಿಯಾಗಿ ಟೈಟಲ್ ಅನೌನ್ಸ್ ಮಾಡಿಸಿಕೊಂಡು ಶೂಟಿಂಗ್ ಹಂತದಲ್ಲಿದೆ. ರಂಗಿತರಂಗ ನಿರ್ದೇಶಿಸಿದ ಅನೂಪ್ ಭಂಡಾರಿಯವರೇ ರಾಜರಥವನ್ನು ನಿರ್ದೇಶಿಸುತ್ತಿದ್ದು ನಿರೂಪ್ ಭಂಡಾರಿಯವರು ನಾಯಕನಾಗಿ ಮತ್ತು ಆವಂತಿಕಾ ಶೆಟ್ಟಿ ನಾಯಕಿಯಾಗಿ ಮುಂದುವರೆದಿದ್ದು ಅರ್ಮುಗಂ ರವಿಶಂಕರ್ ಅವರು ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಜಾಲಿಹಿಟ್ಸ್ ಲಾಂಛನದಲ್ಲಿ ಅಜಯ್ ರೆಡ್ಡಿ, ಅಂಜು ವಲ್ಲಭ್,ವಿಶು ಮತ್ತು ಸತೀಶ್ ಶಾಸ್ತ್ರಿಯವರು ಬಂಡವಾಳ ಹೂಡುತ್ತಿರುವ ರಾಜರಥವು ಸಂಪೂರ್ಣ ರೊಮ್ಯಾಂಟಿಕ್ ಕಾಮಿಡಿ ಸಿನೆಮಾವಾಗಿ ಮೂಡಿಬರಲಿದೆ.

ತಮ್ಮ ಚೊಚ್ಚಲ ನಿರ್ದೇಶನದಲ್ಲೇ ಬಾಕ್ಸಾಫೀಸ್ ದೋಚಿರುವ ಅನೂಪ್ ಭಂಡಾರಿಯವರು ಪ್ರೇಕ್ಷಕರ ಅಪಾರ ನಿರೀಕ್ಷೆಯನ್ನು ಹೊತ್ತುಕೊಂಡು ಹೊಸಚಿತ್ರ ನಿರ್ದೇಶನಕ್ಕೆ ಸಜ್ಜಾಗಿದ್ದಾರೆ. ನಿರ್ದೇಶನ ಮಾತ್ರವಲ್ಲದೆ ಸಂಗೀತ ಮತ್ತು ಸಾಹಿತ್ಯದಲ್ಲೂ ಪಾಂಡಿತ್ಯವಿರುವ ಅನೂಪ್ ಅವರು ರಂಗಿತರಂಗದಂತೆ ರಾಜರಥದಲ್ಲೂ ತಮ್ಮ ಕೈಚಳಕ ಪ್ರದರ್ಶಿಸಲಿದ್ದಾರೆ. ಹಿನ್ನೆಲೆ ಸಂಗೀತದಲ್ಲಿ ಉಳಿದವರು ಕಂಡಂತೆ ಚಿತ್ರದ ಸಂಗೀತ ನಿರ್ದೇಶಕ ಬಿ.ಅಜನೀಶ್ ಲೋಕನಾಥ್ ಅವರು ಮೋಡಿ ಮಾಡಲಿದ್ದಾರೆ. ಉಳಿದಂತೆ ರಂಗಿತರಂಗದ ವಿಲಿಯಂ ಡೇವಿಡ್ ಅವರೇ ರಾಜರಥದ ಯಾತ್ರೆಯನ್ನು ಸೆರೆಹಿಡಿಯಲಿದ್ದಾರೆ.

ಪರಭಾಷಾ ಬಿಗ್ ಬಜೆಟ್ ಸಿನೆಮಾಗಳೆದುರು ಚಳಿ ಹಿಡಿದಂತೆ ಮುದುರಿ ಕೂರುವ ಸ್ಯಾಂಡಲ್ ವುಡ್ ಗೆ ಮುನ್ನುಗ್ಗಿ ಗೆಲ್ಲುವ ಪಾಠ ಕಲಿಸಿರುವ ರಂಗಿತರಂಗ ತಂಡದ ರಾಜರಥವು ಮತ್ತೊಂದು ಇತಿಹಾಸ ನಿರ್ಮಿಸಲಿ.

See also  ಸುದೀಪ್ ನ ಮುಂದಿನ ಚಿತ್ರ ನಿರ್ದೇಶಿಸಲಿರುವ ಕೃಷ್ಣ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು