News Kannada
Sunday, September 25 2022

ಮನರಂಜನೆ

ಕೊಂಕಣಿ ಭಾಷಿಗರು ತಪ್ಪದೇ ನೋಡಲೇಬೇಕಾದ ಸಿನೆಮಾ “ನಶಿಬಾಚೊ ಖೆಳ್” - 1 min read

Photo Credit :

ಕೊಂಕಣಿ ಭಾಷಿಗರು ತಪ್ಪದೇ ನೋಡಲೇಬೇಕಾದ ಸಿನೆಮಾ “ನಶಿಬಾಚೊ ಖೆಳ್”

ಆಗಸ್ಟ್ 12 ರಂದು ಬಿಡುಗಡೆಯಾಗಿ ಭರ್ಜರಿ ಪ್ರದರ್ಶನ ಕಾಣುತ್ತಿರುವ ಹ್ಯಾರಿ ಫೆರ್ನಾಂಡೀಸ್ ಅವರ ನಿರ್ದೇಶನದ “ನಶಿಬಾಚೊ ಖೆಳ್” ಕಡಿಮೆ ವೆಚ್ಚದಲ್ಲಿ ತಯಾರಾಗಿ ಸುದ್ದಿ ಮಾಡುತ್ತಿರುವ ಸಿನೆಮಾ. ಪ್ರೆಸ್ಟನ್ ಎಂಟರ್ ಪ್ರೈಸಸ್ ಲಾಂಛನದಲ್ಲಿ ಹೆನ್ರಿ ಡಿಸಿಲ್ವಾ ಅವರು ಕಥೆ, ಸಂಭಾಷಣೆ ಬರೆದು ನಿರ್ಮಿಸುತ್ತಿರುವ ನಶಿಬಾಚೊ ಖೆಳ್ ತ್ರಿಕೋನ ಪ್ರೇಮಕಾವ್ಯ.


ಮುಂಬಯಿನಲ್ಲಿ ಉದ್ಯೋಗದಲ್ಲಿರುವ ನಾಯಕ ಜಾನ್ಸನ್ (ಎಲ್ಟನ್ ಮಸ್ಕರೇನ್ಹಸ್) ತನ್ನ ಬಾಸ್ ನ ಮಗಳು ಸೋಫಿಯಾಳ (ಎಸ್ತೆರ್ ನೊರೊನ್ಹಾ) ಪ್ರೇಮಪಾಶದಲ್ಲಿ ಸಿಲುಕುತ್ತಾನೆ ಆದರೆ ಊರಲ್ಲಿರುವ ಅನಾರೋಗ್ಯ ಪೀಡಿತ ತಾಯಿಯ ಚಾಕರಿ ಮಾಡುತ್ತಿರುವ ಸಿಂಥಿಯಾಳನ್ನು (ರಂಜಿತಾ ಲೂವಿಸ್) ಅನಿವಾರ್ಯ ಕಾರಣದಿಂದಾಗಿ ಮದುವೆಯಾಗುವ ನಾಯಕ ಮದುವೆ ನಂತರ ಮುಂಬಯಿಗೆ ಹೋದಾಗ ಅಪಘಾತಕ್ಕೀಡಾಗಿ ಸಾವಿನ ಗಡಿಯಲ್ಲಿರುವ ತನ್ನ ಬಾಸ್ ನ ಇಚ್ಛೆಯಂತೆ ಮುಂದೆ ಸೋಫಿಯಾಳನ್ನು ಮದುವೆಯಾಗಿ ತನ್ನ ಪ್ರೀತಿಯನ್ನು ಉಳಿಸಿಕೊಳ್ಳುತ್ತಾನಾ? ಅಥವಾ ತನ್ನ ತಾಯಿಯ ಅಣತಿಯಂತೆ ಮದುವೆಯಾದ ಸಿಂಥಿಯಳನ್ನು ಉಳಿಸಿಕೊಳ್ಳುತ್ತಾನಾ ಎಂಬುದೇ ಚಿತ್ರದ ಕಥೆ. ನಾಯಕ ಎಲ್ಟನ್ ಮತ್ತು ಎರಡನೇ ನಾಯಕಿ ರಂಜಿತಾ ಮೊದಲ ಬಾರಿಗೆ ಕ್ಯಾಮೆರಾ ಎದುರಿಸಿ ಸೈ ಎನಿಸಿಕೊಂಡರೆ ನಾಯಕಿ ಎಸ್ತೆರ್ ನೊರೊನ್ಹಾ ತನ್ನ ಸೌಂದರ್ಯ ಮತ್ತು ನಟನೆಯಲ್ಲಿ ಪ್ರೇಕ್ಷಕರನ್ನು ಕಾಡುತ್ತಾರೆ, ಇನ್ನು ಕಾಮಿಡಿ ಪಾತ್ರದಲ್ಲಿ ಭೂರಿ ಭೋಜನವನ್ನು ಉಣಬಡಿಸಿದ ಗೋವಾದ ಪ್ರಿನ್ಸ್ ಜೇಕಬ್ ಸೂಪರ್, ಸಿಂಥಿಯಾಳನ್ನು ಕಾಡುವ ಭಗ್ನಪ್ರೇಮಿ ಖಳನಾಗಿ ಅಭಿನಯಿಸಿದ ಕ್ಲ್ಯಾನ್ವಿನ್ ಫೆರ್ನಾಂಡೀಸ್ ಚಿತ್ರದ ಕೊನೆವರೆಗೆ ಏಕೈಕ ಖಳನಾಗಿ ನಾಯಕಿಯಷ್ಟೇ ಪ್ರೇಕ್ಷಕರನ್ನೂ ಕಾಡುತ್ತಾರೆ.

ನಿರ್ದೇಶನ, ಕ್ಯಾಮೆರಾ, ಸಂಕಲನ ಮತ್ತು ಡೈಲಾಗ್ ಡೆಲಿವರಿಯಲ್ಲಾದ ತಪ್ಪುಗಳನ್ನು ಮನ್ನಿಸಿ ಚಿತ್ರ ನೋಡುವುದಾದರೆ ಕೊಟ್ಟ ಕಾಸಿಗೆ ಖಂಡಿತವಾಗಿ ಮೋಸವಿಲ್ಲ. ಚಿತ್ರದ ಹಾಡುಗಳು ಎಲ್ಲೋ ಕೇಳಿದಂತೆ ಅನಿಸಿದರೂ ಚಿತ್ರಕ್ಕೆ ಪೂರಕವಾಗುವಂತೆ ಬಳಸಿಕೊಂಡಿರುವುದು ಪ್ರೇಕ್ಷಕನ ಮನಮುಟ್ಟುತ್ತವೆ. ಕಡಿಮೆ ಬಜೆಟ್ಟಿನಲ್ಲಿ ತಯಾರಾದ ಚಿತ್ರವು ಬಿಡುಗಡೆಯಾದ ದಿನದಿಂದ ಕೊಂಕಣಿ ಭಾಷಿಗರ ಮನಸೆಳೆದಿರುವುದು ಮುಂಬರುವ ಕೊಂಕಣಿ ಚಿತ್ರಗಳಿಗೆ ಶುಭಶಕುನವೆಂದೇ ಭಾವಿಸಬಹುದು.

See also  ಬಂಜರು ಭೂಮಿಯಲ್ಲಿ ಕಲ್ಪವೃಕ್ಷವನ್ನು ಬೆಳೆಸಿದ ತಮಿಳು ನಟ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು