News Kannada
Friday, September 30 2022

ಮನರಂಜನೆ

ಮನ ಮೋಹಿಸುವ ಬ್ಯೂಟಿ “ಮಡಮಕ್ಕಿ” - 1 min read

Photo Credit :

ಮನ ಮೋಹಿಸುವ ಬ್ಯೂಟಿ “ಮಡಮಕ್ಕಿ”

ಹಲವು ವಿಶೇಷತೆಗಳಿಂದ ಸುದ್ದಿ ಮಾಡಿದ ಹೊಸಬರ ಚಿತ್ರ “ಮಡಮಕ್ಕಿ” ಒಂದು ವರುಷದ ಹಿಂದೆ ಮಂಗಳೂರು ಪರಿಸರದ ಸುತ್ತಮುತ್ತ “ಸಾಧು” ಹೆಸರಿನಲ್ಲಿ ಚಿತ್ರೀಕರಣಗೊಂಡು ಆಗಸ್ಟ್ 19 ರಂದು ರಾಜ್ಯಾದ್ಯಾಂತ ತೆರೆಕಂಡಿದೆ. ಮಂಗಳೂರು ಮೂಲದ ವಿನಯ್ ಪ್ರೀತಂ ಚೊಚ್ಚಲ ನಿರ್ದೇಶನದ ಚಿತ್ರಕ್ಕೆ ಶಿವಣ್ಣ ದಾಸನಪುರ ಬಂಡವಾಳ ಹೂಡಿದರೆ ಇವರ ಪುತ್ರ ತನುಷ್ ನಾಯಕನಾಗಿ ಬಣ್ಣ ಹಚ್ಚಿದ್ದಾರೆ.

ರೌಡಿ ಸಾಧುವಿನ(ತನುಷ್) ಎನ್ ಕೌಂಟರ್ ಮಾಡಲು ಬೆನ್ನುಬೀಳುವ ಪೋಲಿಸ್ ಪಡೆ (ಸಾಯಿಕುಮಾರ್ ಮತ್ತು ತಂಡ) ಮತ್ತು ತನ್ನ ತಾಯಿ ರತ್ನಮ್ಮಳನ್ನು (ತಾರಾ) ನೋಡಲು ಮುಂಬಯಿಯಿಂದ ಊರಿಗೆ ಬರುವ ಸಾಧು ಮತ್ತು ತಂಡದ ನಡುವಿನ ಕಣ್ಣಾಮುಚ್ಚಾಲೆಯಾಟ, ಆಕಸ್ಮಿಕವಾಗಿ ಸಿಗುವ ಬಾಲ್ಯದ ಗೆಳತಿ (ನಿಖಿತಾ ನಾರಾಯಣ್) ಮತ್ತು ನಾಯಕನ ಪ್ರೇಮದಾಟ, ಮಗನಿಗಾಗಿ ಕಾಯುತ್ತಿರುವ ರತ್ನಮ್ಮ ಮತ್ತು ಆಕಸ್ಮಿಕವಾಗಿ ಅತಿಥಿಗಳಾದ ಪೋಲಿಸರ ನಡುವಿನ ಭಾವನೆಗಳ ಆಟ, ತಾಯಿ ಮಗನ ಸಂಬಂಧಗಳ ಪಾಠ ಇವಿಷ್ಟು ಮಡಮಕ್ಕಿಯ ರೆಕ್ಕೆಪುಕ್ಕಗಳು. ಚೊಚ್ಚಲ ಚಿತ್ರದಲ್ಲಿ ಹೊಸತನ್ನು ನೀಡಬೇಕೆಂಬ ತುಡಿತವಿಟ್ಟುಕೊಂಡಿರುವ ನಿರ್ದೇಶಕ ಕಮರ್ಷಿಯಲ್ ಮತ್ತು ಬ್ರಿಡ್ಜ್ ಸಿನೆಮಾವೆಂಬ ಕನ್ ಫ್ಯೂಷನ್ ನಲ್ಲಿ ಸಿಲುಕಿದಂತೆ ಅನಿಸುತ್ತದೆ. ನಾಯಕನಾಗಿ ಬಣ್ಣಹಚ್ಚಿರುವ ತನುಷ್ ನಟನೆಯಲ್ಲಿ ತುಂಬಾನೇ ಪಳಗಬೇಕಿದೆ, ನಾಯಕಿ ನಿಖಿತಾ ತನಗೆ ಸಿಕ್ಕಿರುವ ಅವಕಾಶವನ್ನು ಸಾಕಷ್ಟು ಚೆನ್ನಾಗಿ ಬಳಸಿದ್ದಾರೆ.

ಪೋಲಿಸ್ ಪಾತ್ರಧಾರಿ ರಾಜೇಂದ್ರ ಕಾರಂತ್ ಅವರ ನಟನೆ ಅತಿರೇಕವೆನಿಸಿದರೆ ಸಾಯಿಕುಮಾರ್ ತಮ್ಮ ಹಳೆಯ ಚಿತ್ರಗಳ ನಟನೆಯನ್ನು ನೆನಪಿಸುತ್ತಾರೆ. ಮುನಿ, ತಾರಾ ಮತ್ತು ಇತರರು ಕೊಟ್ಟ ಪಾತ್ರಗಳನ್ನು ಚೆನ್ನಾಗಿ ಅಭಿನಯಿಸಿದ್ದಾರೆ.  ನಾಯಕ ಮತ್ತು ನಾಯಕಿ ಮಂಗಳೂರು ಮೂಲದವರಾದರೂ ಮಂಗಳೂರು ಭಾಷೆ ತಿಳಿಯದಿರುವುದು ಸಿನೆಮಾದ ದುರಾದೃಷ್ಟ ಅನಿಸುತ್ತದೆ. ಅನೂಪ್ ಸೀಳೀನ್ ಸಂಗೀತವಿರುವ ಯಾವ ಹಾಡುಗಳೂ ನೆನಪಲ್ಲುಳಿಯುವುದಿಲ್ಲ. ಕ್ಯಾಮೆರಾಮೆನ್ ಕಿರಣ್ ಹಂಪಾಪುರ ಮಡಮಕ್ಕಿಯ ನಿಜವಾದ ಹೀರೋವೆಂದರೆ ತಪ್ಪಿಲ್ಲ. ಕೆ.ಎಂ.ಪ್ರಕಾಶ್ ಸಂಕಲನ ಮತ್ತು ಅನೂಪ್ ಸೀಳೀನ್ ಹಿನ್ನೆಲೆ ಸಂಗೀತ ನಾಯಕನ ತಪ್ಪುಗಳನ್ನೂ ನುಂಗಿಹಾಕಲು ಪ್ರಯತ್ನಿಸಿವೆ. ಕಿರಣ್ ಕ್ಯಾಮೆರಾದಲ್ಲಿ ಸೆರೆಯಾದ ಮಡಮಕ್ಕಿಯ ಮನ ಮೋಹಿಸುವ ಬ್ಯೂಟಿಯನ್ನು ಒಮ್ಮೆ ನೋಡಲಡ್ಡಿಯಿಲ್ಲ.

See also  ಚಿರು ಸರ್ಜಾ ಪತ್ನಿ ಮೇಘನಾ ರಾಜ್‍ಗೆ ಸೀಮಂತ ಶಾಸ್ತ್ರ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು