News Kannada
Sunday, September 25 2022

ಮನರಂಜನೆ

ತೆರೆಗೆ ಬರುತ್ತಿದ್ದಾನೆ ಸಿಪಾಯಿ - 1 min read

Photo Credit :

ತೆರೆಗೆ ಬರುತ್ತಿದ್ದಾನೆ ಸಿಪಾಯಿ

ಒಂದೆರಡು ದಶಕಗಳ ಹಿಂದೆ ರವಿಚಂದ್ರನ್ ನಟನೆಯ ಸಿಪಾಯಿ ತೆರೆಕಂಡು ಧೂಳೆಬ್ಬಿಸಿತ್ತಾದರೂ ಬಾಕ್ಸಾಫೀಸ್ ನಲ್ಲಿ ಗೆಲ್ಲುವಲ್ಲಿ ಸೋಲು ಕಂಡಿತ್ತು. ಈ ಚಿತ್ರದಲ್ಲಿ ತೆಲುಗು ನಟ ಚಿರಂಜೀವಿಯನ್ನು ಕನ್ನಡಕ್ಕೆ ಕರೆತಂದು ನಟನೆ ಮಾಡಿಸುವಲ್ಲಿ ರವಿಚಂದ್ರನ್ ಯಶಸ್ವಿಯಾಗಿದ್ದರು. ಅವತ್ತು ರವಿಚಂದ್ರನ್ ಬೆಟ್ಟದಷ್ಟು ನಿರೀಕ್ಷೆಯನ್ನಿಟ್ಟುಕೊಂಡಿದ್ದರು ಆದರೆ ಅವರಂದು ಕೊಂಡಂತೆ ಆಗಲೇ ಇಲ್ಲ. ಎಲ್ಲೋ ಒಂದು ಕಡೆ ಸೋಲು ಕಂಡಿತ್ತು. ಆದರೆ ರವಿಚಂದ್ರನ್ ಮತ್ತು ಸೌಂದರ್ಯ ಅವರ ನಟನೆ ಇವತ್ತಿಗೂ ನೆನಪಾಗಿಯೇ ಉಳಿದಿದೆ.

ಆದರೆ ಇದೀಗ ಅದೇ ಟೈಟಲ್ ನಲ್ಲಿ ಮತ್ತೊಂದು ಸಿನಿಮಾ ತೆರೆಗೆ ಬರುತ್ತಿದೆ. ಆರೆಂಜ್ ಪಿಕ್ಸಲ್ಸ್ ಲಾಂಛನದಲ್ಲಿ ನಿರ್ಮಾಣವಾಗಿರುವ `ಸಿಪಾಯಿ` ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ರಜತ್ ಮಯಿ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಸಿದ್ಧಾರ್ಥ್ ಮಹೇಶ್ ನಾಯಕರಾಗಿ ನಟಿಸಿರುವ ಈ ಚಿತ್ರದ ನಾಯಕಿ ಶ್ರುತಿ ಹರಿಹರನ್, ಸಂಚಾರಿ ವಿಜಯ್, ಅಚ್ಯುತ ಕುಮಾರ್, ಗೌರೀಶ್ ಅಕ್ಕಿ, ಕೃಷ್ಣ ಹೆಬ್ಬಾಳೆ, ಭರತ್ ಸಿಂಗ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ ನಿರ್ದೇಶನ, ಪರಮೇಶ್ ಛಾಯಾಗ್ರಹಣ ಹಾಗೂ ಅಕ್ಷಯ್ ಪಿ ರಾವ್ ಸಂಕಲನ ಈ ಚಿತ್ರಕ್ಕಿದೆ. ಹೊಸಬರೇ ಅಭಿನಯಿಸಿರುವ ಈ ಚಿತ್ರ ಸ್ಯಾಂಡಲ್ ವುಡ್ ನಲ್ಲಿ ಯಾವ ರೀತಿಯ ಧೂಳೆಬ್ಬಿಸುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

See also  ಮೈಸೂರೆಂದರೆ ನನ್ನೂರು: ನಟ, ನಿರ್ದೇಶಕ ಪ್ರಭುದೇವ್
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು