News Kannada
Friday, October 07 2022

ಮನರಂಜನೆ

ಹೈಕಮಾಂಡ್ ಚಿತ್ರಕ್ಕಾಗಿ ಮೈಸೂರಿನಲ್ಲಿ ಆಡಿಷನ್ - 1 min read

Photo Credit :

ಹೈಕಮಾಂಡ್ ಚಿತ್ರಕ್ಕಾಗಿ ಮೈಸೂರಿನಲ್ಲಿ ಆಡಿಷನ್

ಮೈಸೂರು: ಮಾಜಿ ಸಚಿವ ಸತೀಶ್ ಜಾರಕಿ ಹೊಳಿ ನೂತನವಾಗಿ ನಿರ್ಮಾಣ ಮಾಡುತ್ತಿರುವ ಹೈಕಮಾಂಡ್ ಚಿತ್ರದ ಚಿತ್ರಕ್ಕಾಗಿ ಕಲಾವಿದರ ಆಯ್ಕೆಗಾಗಿ ಇದೇ ತಿಂಗಳ 17 ರಂದು ಮೈಸೂರಿನ ಆಡಿಷನ್ ನಡೆಯಲಿದೆ ಎಂದು ನಿರ್ದೇಶಕ ನಾಗೇಂದ್ರ ಮಾಗಡಿ ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದ್ದಾರೆ.

ನಗರದ ಪತ್ರಕರ್ತ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ನಿರ್ಧೇಶಕ ನರೇಂದ್ರ ಮಾಗಡಿ, ಬುದ್ಧ ಸಿನಿ ಕಂಬೈನ್ಸ್ ಸಂಸ್ಥೆಯು ‘ಹೈಕಮಾಂಡ್’ ಚಿತ್ರವನ್ನು ನಿರ್ಮಿಸುತ್ತಿದ್ದು, ಹೊಸ ಕಲಾವಿದರನ್ನು ಪರಿಚಯಿಸುವ ಸಲುವಾಗಿ ಮೈಸೂರಿನಲ್ಲಿ ನ.17 ರಂದು ಕಲಾವಿದ ಸಂದರ್ಶನವನ್ನು ಏರ್ಪಡಿಸಲಾಗುತ್ತಿದೆ ಎಂದು ಹೇಳಿದರು.

ಅಂದು ಬೆಳಗ್ಗೆ 10.30ಕ್ಕೆ ಇನ್ಸ್ಟಿಟ್ಯೂಟ್ ಆಫ್ ಎಂಜಿನಿಯರ್ಸ್ ನಲ್ಲಿ ಆಡಿಷನ್ಸ್ ನಡೆಯಲಿದ್ದು ಆಸಕ್ತರು ಭಾಗವಹಿಸಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಬಹುದಾಗಿದೆ. ಒಬ್ಬ ಕಲಾವಿದನಿಗೆ 5 ನಿಮಿಷಗಳ ಕಾಲಾವಧಿಯನ್ನು ನಿಗದಿ ಮಾಡಲಾಗಿದೆ. ಜೊತೆಗೆ 2 ಭಾವಚಿತ್ರಗಳನ್ನು ತರಬೇಕು ಎಂದು ಹೇಳಿದರು.

ಈ ಚಿತ್ರವು ರಾಜಕೀಯ ವಿಡಂಬನಾತ್ಮಕತೆಯನ್ನು ಹಾಸ್ಯದ ಮೂಲಕ ತೋರಿಸುತ್ತದೆ. ಈಗಾಗಲೇ ಬೆಳಗಾವಿ, ಕಲ್ಬುರ್ಗಿ, ಚಿತ್ರದುರ್ಗ ಮತ್ತು ಬೆಂಗಳೂರಿನಲ್ಲಿ ಆಡಿಷನ್ಸ್ ನಡೆದಿದ್ದು ಬಳ್ಳಾರಿ, ಮಂಗಳೂರು ಮತ್ತು ರಾಯಚೂರಿನಲ್ಲಿ ಆಯ್ಕೆ ನಡೆಯಬೇಕಾಗಿದೆ. ಬೆಂಗಳೂರಿನಲ್ಲಿ ಅಂತಿಮ ಘಟ್ಟದ ಆಡಿಷನ್ ನಡೆಸಿ, ಅದರಲ್ಲಿ ಆಯ್ಕೆ ಆದವರಿಗೆ ಚಿತ್ರದಲ್ಲಿ ನಟಿಸಲು ಅವಕಾಶ ಕೊಡಲಾಗುತ್ತದೆ ಎಂದು ತಿಳಿಸಿದರು.

See also  ಒಂದೇ ಚಿತ್ರದಲ್ಲಿ ಗಣಿ-ವಿಜಿ ಕಾಂಬಿನೇಷನ್
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು