ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಕಿರು ಚಿತ್ರಗಳು, ಪ್ರಯೋಗಾತ್ಮಕ ಚಿತ್ರಗಳು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿದ್ದು, ಇದೀಗ “ದಿ ಲಾಸ್ಟ್ ಕನ್ನಡಿಗ” ಎನ್ನುವ ಚಿತ್ರವು ಕನ್ನಡ ಚಿತ್ರಪ್ರೇಮಿಗಳಲ್ಲಿ ಹೊಸ ನಿರೀಕ್ಷೆ ಮತ್ತು ಭರವಸೆಯನ್ನು ಹುಟ್ಟುಹಾಕಿದೆ.
ಚಿತ್ರದ ಟಿಸರ್ ಬೆಡುಗಡೆಯಾಗಿದ್ದು, ಸಾಮಾಜಿಕಜಾಲ ತಾಣಗಳಲ್ಲಿ ಒಳ್ಳೆಯ ಪ್ರಶಂಸೆಯ ಜೊತೆಗೆ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. ಕನ್ನಡ ನಟರ ಕನ್ನಡ ಪರ ಸಂಭಾಷಣೆಗಳನ್ನು ಸೇರಿಸಿ ಈ ಚಿತ್ರ ತಯಾರಿಸಲಾಗಿದೆ.
ಈ ಚಿತ್ರದ ಟೈಟಲ್ ಕೂಡ ವಿಭಿನ್ನವಾಗಿದ್ದು, ಚಿತ್ರದ ಮುಖ್ಯ ಭೂಮಿಕೆಯಲ್ಲಿ ಹಿರಿಯ ನಟರಾದ ಜಯಪ್ರಕಾಶ್ ಎನ್ ಬಿ, ರವಿಕಿರಣ್ ರಾಜೇಂದ್ರನ್ ಜೊತೆಗೆ ಕನ್ನಡ ಚಿತ್ರರಂಗದಲ್ಲಿ ಖಳನಟನಾಗಿ ತನ್ನದೇ ಚಾಪು ಮೂಡಿಸಿದ ಗೋಧಿ ಬಣ್ಣ ಸಾಧಾರಣ ಮೈಕಟ್ಟು, ರಾಜಾಹುಲಿ ಚಿತ್ರದ ಅದ್ಭುತ ನಟ ವಸಿಷ್ಠ ಎನ್ ಸಿಂಹ ಅಭಿನಯಿಸಿದ್ದಾರೆ.
‘ಕಲಾತ್ಮಿಕ’ ಬ್ಯಾನರ್ ಅಡಿಯಲ್ಲಿ ಈ ಚಿತ್ರವನ್ನು ಲೂಸಿಯಾ ಖ್ಯಾತಿಯ “ಶ್ರುತಿ ಹರಿಹರನ್ ” ನಿರ್ಮಿಸುತ್ತಿದ್ದು, ಅಕ್ಷಯ್ ಪಿ ರಾವ್ ಸಂಕಲನ, ರಾಘವ್ ಅವರ ಸ್ಟಿಲ್ ಫೋಟೋಗ್ರಫಿ ಸೇರಿದಂತೆ ಅಭಿಷೇಕ್ ಜಿ ಕಾಸರಗೋಡು ಅವರ ಛಾಯಾಗ್ರಹಣ ಮತ್ತು ಮದನ್ ರಾಮ್ ವೆಂಕಟೇಶ್ ಅವರ ನಿರ್ದೇಶನ ಈ ಚಿತ್ರಕ್ಕಿದೆ.