ಬೆಂಗಳೂರು: ನಟಿ ಪೂಜಾಗಾಂಧಿ ಶೀಘ್ರದಲ್ಲೇ ಸಪ್ತಪದಿ ನ ತುಳಿಯಲಿದ್ದಾರೆಂತೆ. ಉದ್ಯಮಿ ಪ್ರಶಾಂತ ಎಂಬಾತನನ್ನು ಪ್ರೀತಿಸುತ್ತಿದ್ದು, ಆತನನ್ನೇ ಮದುವೆಯಾಗುವ ನಿರ್ಧಾರದಲ್ಲಿದ್ದಾರೆ ಎಂದು ತಿಳಿದು ಬಂದಿದೆ.
ಬಿಗ್ ಬಾಸ್ ಸೀಸನ್-4 ನಲ್ಲಿ ತಮ್ಮ ಮುಂದಿನ ಜಿಲೇಬಿ ಚಿತ್ರದ ಪ್ರಮೋಷನ್ ಗಾಗಿ ಆಗಮಿಸಿದ್ದ ಪೂಜಾ ಕೈ ಮೇಲಿರುವ ಹಚ್ಚೆ ಬಗ್ಗೆ ಸುದೀಪ್ ವಿಚಾರಿಸಿದಾಗ ಪೂಜಾ ಈ ವಿಷಯ ಬಾಯ್ಬಿಟ್ಟಿದ್ದಾರೆ. ಹಲವು ದಿನಗಳಿಂದ ಪ್ರಶಾಂತ್ ಅವರನ್ನು ಪೂಜಾ ಪ್ರೀತಿಸುತ್ತಿದ್ದು, ಮನೆಯವರ ಒಪ್ಪಿಗೆ ಮೇರೆಗೆ ಸಪ್ತಪದಿ ತುಳಿಯಲು ನಿರ್ಧರಿಸಿದ್ದಾರಂತೆ. ಪ್ರಶಾಂತ್ ಬಗ್ಗೆ ವಿವರಣೆ ನೀಡಲು ಪೂಜಾ ಬಯಸಲಿಲ್ಲ. ಆದರೆ ಮದುವೆಯಾಗಲಿದ್ದೇನೆ ಎಂದು ಹೇಳಿ ಸುಮ್ಮನಾಗಿದ್ದಾರೆ.