ಕನ್ನಡ ಚಿತ್ರರಂಗದಲ್ಲಿ ‘ಮುಂಗಾರುಮಳೆ’ಯನ್ನು ಸುರಿಸಿ ನಂತರ ‘ಗಾಳಿಪಟ’ವನ್ನು ಹಾರಿಸಿ ಯಶಸ್ಸಿನ ಹೊಸ ಇತಿಹಾಸ ಸೃಷ್ಟಿಸಿದ ಸ್ಯಾಂಡಲ್ ವುಡ್ ನ ಬಹು ಬೇಡಿಕೆಯ ಜೋಡಿ ಗಣೇಶ್ ಮತ್ತು ಯೋಗರಾಜ್ ಭಟ್ ಇವರ ಮೂರನೇ ಚಿತ್ರದ ಚಿತ್ರೀಕರಣವು ಮುಂದಿನ ವಾರ ಶುರುವಾಗಲಿದೆ.
ಈ ಯಶಸ್ವಿ ಜೋಡಿಯ ಮುಂದಿನ ಚಿತ್ರಕ್ಕೆ ‘ಮುಗುಳುನಗೆ’ ಎಂಬ ಹೆಸರಿಡಲಾಗಿದ್ದು, ಚಿತ್ರಕ್ಕೆ ವಿ.ಹರಿಕೃಷ್ಣ ಸಂಗೀತವಿದೆ. ನಿರ್ದೇಶನದ ಜೊತೆಗೆ ಕಥೆ, ಚಿತ್ರಕಥೆ, ಸಂಭಾಷಣೆಯನ್ನು ಯೋಗರಾಜ್ ಭಟ್ ಬರೆದಿದ್ದಾರೆ.
ಯೋಗರಾಜ್ ಮೂವೀಸ್, ಗೋಲ್ಡನ್ ಮೂವೀಸ್ ಮತ್ತು ಎಸ್.ಎಸ್. ಫಿಲ್ಮ್ಸ್ ಜಂಟಿಯಾಗಿ ‘ಮುಗುಳುನಗೆ’ ಚಿತ್ರವನ್ನು ನಿರ್ಮಿಸುತ್ತಿದೆ.