ಭಾರತ ಚಿತ್ರರಂಗದ ಜನಪ್ರಿಯ ನಾಯಕ ನಟ, ಸ್ಟೈಲ್ ಕಿಂಗ್ ರಜನಿಕಾಂತ್ ಅಭಿನಯದ 2.0 ಚಿತ್ರದ ಶೂಟಿಂಗ್ ಭರದಿಂದ ಸಾಗುತ್ತಿದ್ದು, ಚೆನ್ನೈಯಲ್ಲಿ ನಡೆಯುತ್ತಿದ್ದ ಚಿತ್ರದ ಶೂಟಿಂಗ್ ಸಂದರ್ಭ ರಜನಿ ಗಾಯಗೊಂಡಿದ್ದಾರೆ.
ಚಿತ್ರೀಕರಣದ ವೇಳೆ ರಜನಿಯವರ ಮೊಳಕಾಲಿಗೆ ಗಾಯವಾಗಿದ್ದು, ಚೆಟ್ಟಿನಾಡ್ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ರಜನಿಯನ್ನು ದಾಖಲಿಸಲಾಗಿದ್ದು, ಇದೀಗ ಅವರು ಗುಣಮುಖರಾಗಿದ್ದಾರೆ ಎಂದು ಚಿತ್ರತಂಡ ಹೇಳಿದೆ.
2.0 ಚಿತ್ರದಲ್ಲಿ ಬಾಲಿವುಡ್ ನ ಸ್ಟಾರ್ ಅಕ್ಷಯ್ ಕುಮಾರ್, ಆಮಿ ಜಾಕ್ಸನ್, ಸುಧಾಂಶು ಪಾಂಡೆ ಮತ್ತು ಆದಿಲ್ ಹುಸೇನ್ ಚಿತ್ರದ ಮುಖ್ಯ ಪಾತ್ರಗಳಾಗಿದ್ದು, ತಮಿಳಿನ ಸ್ಟಾರ್ ಡೈರೆಕ್ಟರ್ ಶಂಕರ್ ನಿರ್ದೇಶನದ ಬಹುನಿರೀಕ್ಷೆಯ ಚಿತ್ರ ಇದಾಗಿದ್ದು, ಬರೋಬ್ಬರಿ 400 ಕೋಟಿ ರೂ. ಬಜೆಟ್ ನಲ್ಲಿ ಈ ಚಿತ್ರ ನಿರ್ಮಾಣವಾಗುತ್ತಿದೆ.