News Kannada
Monday, February 06 2023

ಮನರಂಜನೆ

ಕೋಸ್ಟಲ್ ವುಡ್ ನ ಸಕಲಕಲಾವಲ್ಲಭ…”ಪೃಥ್ವಿ ಅಂಬರ್”

Photo Credit :

ಕೋಸ್ಟಲ್ ವುಡ್ ನ ಸಕಲಕಲಾವಲ್ಲಭ...

ರೇಡಿಯೋ ಜಾಕಿಯಿಂದ, ಚಿತ್ರರಂಗದವರೆಗೆ ಯಾವುದೇ ಗಾಡ್ ಫಾದರ್ ಇಲ್ಲದೆ ತನ್ನ ಸತತ ಪರಿಶ್ರಮದಿಂದ ಈಗ ತುಳು, ಕನ್ನಡ ಚಿತ್ರರಂಗದಲ್ಲಿ ಹೆಸರು ಮಾಡುತ್ತಿರುವ ನಟ ಪೃಥ್ವಿ ಅಂಬರ್.  ಆರ್. ಜೆ ನಾಗರಾಜ್ ಎಂಬ ಹೆಸರಿನಿಂದ ‘ನಮ್ಮಣ್ಣ ಬಾಂಬ್’ ಎನ್ನುವ ಸೂಪರ್ ಹಿಟ್ ಕಾರ್ಯಕ್ರಮವನ್ನು ನೀಡಿ ಮಂಗಳೂರಿನಲ್ಲಿ ತನ್ನದೇ ಆದ ಹೊಸ ಟ್ರೆಂಡ್ ಸೃಷ್ಟಿಮಾಡಿದ್ದ ಇವರು ಚಿತ್ರರಂಗದ ಆಪ್ತರೊಬ್ಬರ ಸಲಹೆಯಂತೆ ಇದೀಗ ಪೃಥ್ವಿ ಅಂಬರ್ ಎನ್ನುವ ಹೆಸರನ್ನಿಟ್ಟುಕೊಂಡಿದ್ದಾರೆ.

ನಿರೂಪಣೆಯಲ್ಲೂ ತನ್ನದೇ ಆದ ವಿಭಿನ್ನ ಸ್ಟೈಲ್, ಮ್ಯಾನರಿಸಂಗೆ ಫೇಮಸ್, ಕೇವಲ ಮಾತಿನಲ್ಲಿ ಮಾತ್ರವಲ್ಲದೆ ನೃತ್ಯದಲ್ಲೂ ಸೈ ಎನಿಸಿಕೊಂಡಿರುವ ಇವರು ಕನ್ನಡ ಕಿರುತೆರೆಯ ಮೊಟ್ಟಮೊದಲ ಡ್ಯಾನ್ಸಿಂಗ್ ರಿಯಾಲಿಟಿ ಶೋ ಈಟಿವಿ ವಾಹಿನಿಯ ‘ಗ್ರೇಟ್ ಕರ್ನಾಟಕ ಡ್ಯಾನ್ಸ್ ಲೀಗ್’ ಕನ್ನಡದ ಮೊಟ್ಟಮೊದಲ ರಿಯಾಲಿಟಿ ಶೋ ವಿನ್ನರ್.  ನಾಗರಾಜ್ ಮೂಲತ: ಉಡುಪಿ ಪರಿಸರದವರು. ಬಾಲ್ಯದಿಂದಲೇ ನಟನಾಗಬೇಕು ಎಂಬ ಆಸೆಯಂತೆಯೇ ಇದೀಗ ಒಬ್ಬ ಉತ್ತಮ ನಟನಾಗಿ ಕನ್ನಡ ಕಿರುತೆರೆ ಸೇರಿದಂತೆ ತುಳು ಚಿತ್ರರಂಗ ಹಾಗೂ ಕನ್ನಡ ಚಿತ್ರರಂಗದಲ್ಲಿ ಮಿಂಚುತ್ತಿದ್ದಾರೆ.

ತುಳು ಫಿಲ್ಮ್ ಇಂಡಸ್ಟ್ರಿಯ ಬಹುನಿರಿಕ್ಷೆಯ ಚಿತ್ರ ‘ಪಿಲಿಬೈಲ್ ಯಮುನಕ್ಕ’ ಚಿತ್ರದಲ್ಲಿ ನಾಯಕನಾಗಿ ಅಭಿನಯಿಸಿದ್ದು, ಡಿ. 9 ರಂದು ಚಿತ್ರ ಬಿಡುಗಡೆಯಾಗಲಿದೆ. ‘ಬರ್ಕೆ’ ಚಿತ್ರದ ಮೂಲಕ ಕೋಸ್ಟಲ್ ವುಡ್ ಗೆ ಪರಿಚಿತನಾದ ಇವರು, ಕನ್ನಡ ಕಿರುತೆರೆಯ ‘ಸಾಗರ ಸಂಗಮ’ ಎನ್ನುವ ತನ್ನ ಧಾರವಾಹಿಯಲ್ಲಿ ಮೊಟ್ಟಮೊದಲ ಕನ್ನಡ ಕಿರುತೆರೆಯ ಜರ್ನಿಯಲ್ಲೇ ನಾಯಕನಟನಾಗಿ, ನಂತರ ಝೀ ವಾಹಿನಿಯ ಪ್ರಸಿದ್ಧ ಧಾರವಾಹಿ ‘ರಾಧಾ ಕಲ್ಯಾಣ’, ‘ಲವಲವಿಕೆ’ಯಲ್ಲಿ ಅಭಿನಯಿಸಿ ಯಶಸ್ವಿಯಾಗಿದ್ದು, ಇದೀಗ ಕನ್ನಡ ಚಲನಚಿತ್ರರಂಗಕ್ಕೂ ಪಾದಾರ್ಪಣೆ ಮಾಡಿದ್ದಾರೆ. ಇವರ ಅಭಿನಯದ “ರಾಜರು” ಎನ್ನುವ ಕನ್ನಡ ಚಿತ್ರ ಬಿಡುಗಡೆಗೆ ಸಿದ್ಧವಾಗಿದ್ದು, ಸದ್ಯಕ್ಕೆ ಕನ್ನಡದ ಸ್ಟಾರ್ ಡೈರೆಕ್ಟರೊಬ್ಬರು ನಿರ್ದೇಶಿಸುತ್ತಿರುವ ಬಿಗ್ ಬಜೆಟ್ ಚಿತ್ರವೊಂದರ ಶೂಟಿಂಗ್ ನಲ್ಲಿ ಬಿಝಿಯಾಗಿದ್ದಾರೆ.

ಕಿರುಚಿತ್ರ ಸೇರಿದಂತೆ ಸೂಪರ್ ಹಿಟ್ ಆಲ್ಬಂ ಹಾಡುಗಳನ್ನು ತಾನೇ ಬರೆದು, ಸಂಗೀತ ಸಂಯೋಜಿಸಿ, ಹಾಡಿ, ನಟಿಸಿ ನಿರ್ದೇಶಿಸಿದ ಪೃಥ್ವಿ, ಒಬ್ಬ ಆರ್ ಜೆಯಾಗಿ, ನಿರೂಪಕನಾಗಿ, ಡ್ಯಾನ್ಸರ್, ಹಾಡುಗಾರ, ಬರಹಗಾರ, ಕೊರಿಯೋಗ್ರಾಫರ್ ಹಾಗೂ ಮಾರ್ಷಲ್ ಆರ್ಟ್ಸ್ ಜೊತೆಗೆ ಮಿಮಿಕ್ರಿ ಕಲಿತಿರುವ ಪೃಥ್ವಿ ಕೋಸ್ಟಲ್ ವುಡ್ ನ ಸಕಲಕಲಾವಲ್ಲಭ ಎಂದು ಹೇಳಬಹುದು. ಎಲ್ಲಾ ತರಹದ ಚಾಲೆಂಜಿಗ್ ಪಾತ್ರಗಳನ್ನು ಮಾಡಲು ಇಷ್ಟಪಡುವ ಪೃಥ್ವಿ, ತಮಿಳಿನ ಸಕಲಾ ಕಲಾವಲ್ಲಭ ಕಮಲ್ ಹಾಸನ್ ಅಚ್ಚುಮೆಚ್ಚಿನ ನಾಯಕನಟ ಮತ್ತು ಅನುಷ್ಕಾ ಶರ್ಮಾ, ಕಂಗನಾ ರಣಾವತ್ ನೆಚ್ಚಿನ ನಾಯಕಿಯರು. ಜೊತೆಗೆ ಕಮಲ್ ಅವರ ನಟನೆ, ಡ್ಯಾನ್ಸ್, ಡೈರೆಕ್ಷನ್ ಅಂದರೆ ಪೃಥ್ವಿಗೆ ತುಂಬಾನೆ ಇಷ್ಟ.

ಕೋಸ್ಟಲ್ ವುಡ್ ನಲ್ಲಿ ಈಗಾಗಲೇ ಸಾಕಷ್ಟು ಭರವಸೆಯನ್ನು ಹುಟ್ಟುಹಾಕಿದ ‘ಪಿಲಿಬೈಲ್ ಯಮುನಕ್ಕ’ ಚಿತ್ರದ ಬಗ್ಗೆ ನ್ಯೂಸ್ ಕನ್ನಡ.com ಜೊತೆ ಚಿತ್ರದ ನಾಯಕ ಪೃಥ್ವಿ ತನ್ನ ವೈಯಕ್ತಿಕ ಅಭಿಪ್ರಾಯವನ್ನು ಹಂಚಿಕೊಂಡರು.
 
1. ಪಿಲಿಬೈಲ್ ಚಿತ್ರದ ಬಗ್ಗೆ…
 ಸಂಪೂರ್ಣ ಮನರಂಜನೆಯ ಚಿತ್ರ, ಆ್ಯಕ್ಷನ್, ಕಾಮಿಡಿ, ಒಳ್ಳೆಯ ಸಾಂಗ್ಸ್ ಎಲ್ಲವೂ ಇದೆ ಪ್ರೇಕ್ಷಕರ ನಿರೀಕ್ಷೆಯನ್ನು ಹುಸಿಮಾಡದೆ ಔಟ್ ಆ್ಯಂಡ್ ಔಟ್ ಮನರಂಜನೆ ಕೊಡುತ್ತದೆ.

See also  ನೆಚ್ಚಿನ ನಾಯಕನ ಹುಟ್ಟುಹಬ್ಬಕ್ಕೆ ೨ಚಿರತೆ ದತ್ತು ಪಡೆದ ದರ್ಶನ್ ಅಭಿಮಾನಿಗಳು

2. ಸೂರಜ್ ಶೆಟ್ಟಿ ಅವರ ಜೊತೆ ಕೆಲಸ ಮಾಡಿದ ಅನುಭವ..
  ಆಡಿಯನ್ಸ್ ನಾಡಿಮಿಡಿತವನ್ನು ಸೂರಜ್ ಶೆಟ್ಟಿಯವರು ಚೆನ್ನಾಗಿ ತಿಳ್ಕೊಂಡಿದ್ದಾರೆ. ಸ್ಟ್ರಿಪ್ಟ್ ,ಸ್ಕ್ರೀನ್ ಪ್ಲೇಯಲ್ಲಿ ಎತ್ತಿದ ಕೈ, ಇವರ ಜೊತೆ ಕೆಲಸ ಮಾಡುವ ಅವಕಾಶ ಸಿಕ್ಕಿದ್ದು  ನಿಜಕ್ಕೂ ತುಂಬಾನೇ ಹೆಮ್ಮೆ ಮತ್ತು ಸಂತೋಷಪಡುವಂತಹ ವಿಷಯ.

3. ಒಂದೇ ಶಬ್ಧದಲ್ಲಿ ಪಿಲಿಬೈಲ್ ಯಮುನಕ್ಕ ಚಿತ್ರ ?
   100% ಮನರಂಜನೆ ಗ್ಯಾರೆಂಟಿ

4. ಚಿತ್ರದಲ್ಲಿ ನಿಮ್ಮ ಪಾತ್ರ..
   ನಿಜವಾಗಿಯೂ ಒಂದು ಉತ್ತಮ ಪಾತ್ರ, ಆ್ಯಕ್ಷನ್, ಕಾಮಿಡಿ ಎಲ್ಲವೂ ಒಳಗೊಂಡಿರುವ ನಾಯಕನ ಪಾತ್ರ, ಈ ಚಿತ್ರದಿಂದ ನನಗೆ ಇಂಡಸ್ಟ್ರಿಯಲ್ಲಿ ಒಳ್ಳೆ ಬ್ರೇಕ್ ಸಿಗುತ್ತೆ ಎನ್ನುವ ನಂಬಿಕೆಯಿದೆ.

5.ನಿಜ ಜೀವನದಲ್ಲಿ ಪೃಥ್ವಿ ಹೇಗೆ ?
  ತುಂಬಾನೇ ಸಿಂಪಲ್ ಮತ್ತು ಶಿಸ್ತುಬದ್ಧ ವ್ಯಕ್ತಿ.

6. ಇದೇ ವಾರ ಚಿತ್ರ ರಿಲೀಸ್ ಗೆ ರೆಡಿ ಆಗಿದೆ… ಹೇಗನಿಸ್ತಾಯಿದೆ ?
   ತುಂಬಾನೇ ಖುಷಿ ಆಗ್ತಾ ಇದೆ ಒಳ್ಳೆ ಪ್ರೋಡ್ಯೂಸರ್, ಡೈರೆಕ್ಟರ್, ಒಟ್ಟಿನಲ್ಲಿ ಒಳ್ಳೆ ಟೀಮ್, ಇವರ ಜೊತೆ ಕೆಲಸಮಾಡಿದ್ದು ತುಂಬಾನೆ ಖುಷಿಯಾಗ್ತಿದೆ. ಇದ್ರ ಜೊತೆ ನನ್ನ ಪಾತ್ರ ಹಾಗೂ ಚಿತ್ರವನ್ನು ಜನರು ಯಾವ ರೀತಿ ಸ್ವೀಕರಿಸುತ್ತಾರೆ ಎಂಬ ಕುತೂಹಲದಲ್ಲಿದ್ದೇನೆ.

7. ಈ ಚಿತ್ರದ ಹಾಡುಗಳು ಈಗಾಗಲೇ ಸೂಪರ್ ಹಿಟ್ ಇದ್ರಲ್ಲಿ ನಿಮ್ಮ ಇಷ್ಟದ ಹಾಡು ?
   ಪಟ್ಲ ಸತೀಶ್ ಶೆಟ್ಟಿ ಹಾಡಿರುವ ‘ಮಾಯಕಡೊಂಜಿ….’ ತುಂಬಾನೇ ಇಷ್ಟ. ಇದ್ರ ಜೊತೆ ಟೈಟಲ್ ಸಾಂಗ್ ಕೂಡ.

8. ಇತ್ತೀಚೆಗೆ ತುಳು ಚಿತ್ರರಂಗಲ್ಲಿ ಒಂದರ ಹಿಂದೆ ಒಂದು ಚಿತ್ರ ಬರ್ತಾ ಇದೆ.. ಇದು ಒಳ್ಳೆಯ ಸೂಚನೆಯಾ ? ನಿಮ್ಮ ಅಭಿಪ್ರಾಯ..
   ಒಳ್ಳೆಯದೇ…ತುಳು ಚಿತ್ರರಂಗ ಕೂಡ ಬೆಳಿತಾ ಇರುವುದು ಖುಷಿ ಕೊಡುವ ಸಂಗತಿ. ಒಳ್ಳೆ ಚಿತ್ರ ಯಾವತ್ತು ಸೋಲಲ್ಲ, ಮತ್ತು ಒಳ್ಳೆ ಕ್ವಾಲಿಟಿ ಚಿತ್ರ ಕೊಟ್ರೆ ಜನರು ನೊಡೇ ನೋಡ್ತಾರೆ. ಹಾಗೆನೇ ಚಿತ್ರ ಬಿಡುಗಡೆ ಮಾಡುವಾಗ ಪರಸ್ಪರ ಹೊಂದಾಣಿಕೆಯಿಂದ, ನಿರ್ಮಾಪಕನಿಗೆ ಯಾವುದೇ ಮೋಸ ಆಗದಂತೆ ಚಿತ್ರ ಬಿಡುಗಡೆ ಮಾಡಿದರೆ ಉತ್ತಮ.

9. ಚಿತ್ರರಂಗಕ್ಕೆ ಬರುವ ಹೊಸಬರಿಗೆ ಪೃಥ್ವಿಯವರ ಕಿವಿ ಮಾತು..
   ಇಂಡಸ್ಟ್ರಿಯ ಹೊರಗಿನ ತಳುಕು ಬಳುಕು ನೋಡಿ ಯಾವತ್ತು ಬರ್ಬೇಡಿ, ಚಿತ್ರರಂಗದಲ್ಲಿ ಬೆಳೆಯುತ್ತೇನೆ ಎಂಬ ಹಠದ ಜೊತೆಗೆ ಸಹನೆ, ತಾಳ್ಮೆ, ಪರಿಶ್ರಮ ಈ ಮೂರನ್ನು ಅಳವಡಿಸಿಕೊಂಡವರಿಗೆ ಮಾತ್ರ ಚಿತ್ರರಂಗದಲ್ಲಿ ಬೆಳೆಯಬಹುದು.

10. ಮುಂದೆ… ನಿರ್ದೇಶನ ಮಾಡುವ ಐಡಿಯಾ ..ಏನಾದರೂ ?
  ಹೌದು.. “ಶಟ್ಟರ್ ಬಾಕ್ಸ್” ಎನ್ನುವ ನನ್ನದೇ ಗೆಳೆಯರನ್ನೊಳಗೊಂಡ ಪ್ರೊಡಕ್ಷನ್ ಕಂಪೆನಿಯಿದೆ. ಇದರ ಮೂಲಕ ನಾನೇ ನಿರ್ದೇಶಕನಾಗಿ ಒಂದು ಒಳ್ಳೆಯ ಲವ್ ರೊಮ್ಯಾಂಟಿಕ್ ಫೀಲ್ ಇರುವ ಕನ್ನಡ ಚಿತ್ರ ನೀಡಬೇಕೆಂದುಕೊಂಡಿದ್ದೇನೆ.

ಮಂಗಳೂರಿನ ಖ್ಯಾತ ವಿದ್ಯಾಸಂಸ್ಥೆಗಳಲ್ಲೊಂದಾದ ಸಂತ ಅಲೋಶಿಯಸ್ ಕಾಲೇಜಿನ ಹಳೆ ವಿದ್ಯಾರ್ಥಿಯಾಗಿರುವ ಪೃಥ್ವಿ ಪತ್ರಿಕೋದ್ಯಮ ಪದವೀಧರನಾಗಿದ್ದಾರೆ. ತನ್ನ ಚಿತ್ರರಂಗದ ಜರ್ನಿಯ ಬಗ್ಗೆ ಹೇಳುವಾಗ ಪೃಥ್ವಿ ಎಲ್ಲದಕ್ಕೂ ಸ್ಪೂರ್ತಿ ತನ್ನ ತಂದೆ, ತಾಯಿ ಹಾಗೆನೇ ಚಿಕ್ಕಂದಿನಿಂದಲೂ ನನಗೆ ತುಂಬಾನೇ ಬೆಂಬಲ, ಪ್ರೋತ್ಸಾಹ ನೀಡಿದ ಮಜೂರು ಮತ್ತು ಉಡುಪಿಯ ಜನತೆ ಜೊತೆಗೆ ಕನ್ನಡ ಕಿರುತೆರೆಗೆ ಪರಿಚಯಿಸಿದ ಅಶುಬೆದ್ರ ಇವರಿಗೆ ಕೃತಜ್ಷತೆ ಸಲ್ಲಿಸುವುದನ್ನು ಮರೆಯಲಿಲ್ಲ. 

See also  ಕೊಮ್ಮೇರಹಳ್ಳಿಯಲ್ಲಿ ಅಡ್ಡದಾರಿ ಸಿನಿಮಾಗೆ ಮುಹೂರ್ತ

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು