ತೆಲುಗಿನ ಸ್ಟಾರ್ ನಟ ಅಕ್ಕಿನೇನಿ ನಾಗಾರ್ಜುನ ಕಿರಿಯ ಪುತ್ರ ಅಖಿಲ್ ಅವರ ನಿಶ್ಚಿತಾರ್ಥ ಉದ್ಯಮಿ ಜಿವಿಕೆ ಫ್ಯಾಮಿಲಿಯ ಶ್ರಿಯಾ ಭೂಪಲ್ ಅವರೊಂದಿಗೆ ಅದ್ಧೂರಿಯಾಗಿ ನಡೆಯಿತು.
ಹೈದರಾಬಾದ್ ನ ಅತಿಥಿ ಗೃಹದಲ್ಲಿ ನಡೆದ ಈ ಅದ್ದೂರಿ ನಿಶ್ಚಿತಾರ್ಥ ಸಮಾರಂಭಕ್ಕೆ ಸಂಬಂಧಿಕರು ಸೇರಿದಂತೆ ಅನೇಕ ನಟ ನಟಿಯರು, ಗಣ್ಯವ್ಯಕ್ತಿಗಳು ಆಗಮಿಸಿದ್ದರು. ಅಖಿಲ್ ಮತ್ತು ಶ್ರಿಯಾ ಭೂಪಲ್ ಪ್ರೀತಿಸುತ್ತಿದ್ದು, ಉಭಯ ಕುಟುಂಬಗಳು ಪ್ರೀತಿಗೆ ಗ್ರೀನ್ ಸಿಗ್ನಲ್ ನೀಡಿದೆ.