ಮಾಸ್ತಿಗುಡಿ ಕ್ಲೈಮ್ಯಾಕ್ಸ್ ಚಿತ್ರೀಕರಣದ ವೇಳೆ ಸಾವನ್ನಪ್ಪಿದ ಖಳನಟರಾದ ಅನಿಲ್ ಹಾಗೂ ಉದಯ್ ಕುಟುಂಬಕ್ಕೆ ರಾಕಿಂಗ್ ಸ್ಟಾರ್ ಯಶ್ ಸಹಾಯ ಹಸ್ತ ನೀಡಿದ್ದಾರೆ.
ನವೆಂಬರ್ 7ರಂದು, ತಿಪ್ಪಗೊಂಡನಹಳ್ಳಿ ಕೆರೆಯಲ್ಲಿ ‘ಮಾಸ್ತಿಗುಡಿ’ ಚಿತ್ರದ ಕ್ಲೈಮ್ಯಾಕ್ಸ್ ಚಿತ್ರೀಕರಣದ ವೇಳೆ, ಚಾಪರ್ ನಿಂದ ನೀರಿಗೆ ಹಾರಿದ್ದ ಅನಿಲ್ ಹಾಗೂ ಉದಯ್ ವಿಧಿವಶರಾಗಿದ್ದರು ‘ಯಶೋಮಾರ್ಗ ಫೌಂಡೇಶನ್’ ಮೂಲಕ ರೈತರ, ಬಡ ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿರುವ ನಟ ಯಶ್, ಈಗ ತಮ್ಮ ಸಿನಿಮಾಗಳಲ್ಲಿ ಸಹಕಲಾವಿದರಾಗಿ ಅಭಿನಯಿಸಿದ್ದ ಅನಿಲ್ ಹಾಗೂ ಉದಯ್ ಕುಟುಂಬಸ್ಥರಿಗೆ ನೆರವಾಗಿದ್ದಾರೆ.
ರಾಕಿಂಗ್ ಸ್ಟಾರ್ ಯಶ್ ಸಾರಥ್ಯದಲ್ಲಿ ಸ್ಥಾಪನೆಯಾಗಿರುವ ‘ಯಶೋಮಾರ್ಗ ಫೌಂಡೇಶನ್’ ಮೂಲಕ ಅನಿಲ್ ಹಾಗೂ ಉದಯ್ ಅವರ ಕುಟುಂಬಗಳಿಗೆ ಒಟ್ಟು 6.5 ಲಕ್ಷ ರೂಪಾಯಿಯ ಸಹಾಯ ಧನ ನೀಡಿದ್ದಾರೆ. ದಿವಂಗತ ಅನಿಲ್ ಅವರಿಗೆ ಮದುವೆಯಾಗಿದ್ದು, ಇಬ್ಬರು ಮಕ್ಕಳಿದ್ದರು. ಹೀಗಾಗಿ, ‘ಯಶೋಮಾರ್ಗ ಫೌಂಡೇಶನ್’ ಮೂಲಕ, ಅನಿಲ್ ಅವರ ಮಕ್ಕಳ ವಿದ್ಯಾಭ್ಯಾಸಕ್ಕಾಗಿ 5 ಲಕ್ಷ ರೂಪಾಯಿಯ ಬಾಂಡ್ ನೀಡಿದ್ದಾರೆ ಉದಯ್ ಅವರ ತಾಯಿಗೆ ‘ಯಶೋಮಾರ್ಗ ಫೌಂಡೇಶನ್’ ಮೂಲಕ 1.5 ಲಕ್ಷ ರೂಪಾಯಿಯ ಚೆಕ್ ನೀಡಿದ್ದಾರೆ. ಖಳನಟ ಅನಿಲ್ ಯಶ್ ಅವರ ಮಿಸ್ಟರ್ ಅಂಡ್ ಮಿಸಸ್ ಹಾಗೂ ‘ಸಂತು ಸ್ಟ್ರೈಟ್ ಫಾರ್ವಾರ್ಡ್’ರಾಮಾಚರಿ ಚಿತ್ರದಲ್ಲಿ ಖಳನಟನಾಗಿ ನಟಿಸಿದ್ದರು.