ಜಬಲ್ ಪುರ್: ಸೋನಿ ಟಿವಿಯಲ್ಲಿ ‘ಕ್ರೈಮ್ ಪ್ಯಾಟ್ರೋಲ್’ನಲ್ಲಿ ಪೊಲೀಸ್ ಆಫೀಸರ್ ಪಾತ್ರ ನಿರ್ವಹಿಸುತ್ತಿದ್ದ ಕಿರುತೆರೆ ನಟ ಕಮಲೇಶ್ ಪಾಂಡೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಕಮಲೇಶ್ ಮಧ್ಯಪ್ರದೇಶದ ಜಬಲ್ಪುರ್ನಲ್ಲಿರುವ ತಮ್ಮ ಹೆಂಡತಿಯ ಸಹೋದರಿ ಮನೆಯಲ್ಲಿ ಪಿಸ್ತೂಲ್ನಿಂದ ತಮ್ಮ ಎದೆಗೆ ಗುಂಡು ಹಾರಿಸಿಕೊಂಡು ಮಂಗಳವಾ ಸಾವನ್ನಪ್ಪಿದ್ದಾರೆ. ಈ ವೇಳೆ ಕಮಲೇಶ್ ಅವರ ಪತ್ನಿಯ ಸಹೋದರಿ ಅಂಜನಿ ಚತುರ್ವೇದಿ ಮನೆಯಲ್ಲಿ ಇದ್ದರು ಎನ್ನಲಾಗಿದೆ.
ಅಂಜನಿ ಚತುರ್ವೇದಿಯವರ ಪುತ್ರಿಯ ವಿವಾಹಕ್ಕೆ ಕಮಲೇಶ್ ಅವರನ್ನು ಆಹ್ವಾನಿಸದಿರುವುದರಿಂದ ಬೇಸರಗೊಂಡ ಕಮಲೇಶ್ ಅಂಜನಿ ಮನೆಗೆ ಹೋಗಿ ಜಗಳವಾಡಿದ್ದಾರೆ. ಈ ಸಂದರ್ಭದಲ್ಲಿ ಮೊದಲಿಗೆ ಪಿಸ್ತೂಲ್ನಿಂದ ಗಾಳಿಯಲ್ಲಿ ಗುಂಡು ಹಾರಿಸಿ ಕೊನೆಗೆ ತನ್ನ ಎದೆಗೆ ಶೂಟ್ ಮಾಡಿಕೊಂಡು ಕಮಲೇಶ್ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಕಮಲೇಶ್ ಅವರು ಪತ್ನಿ ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಈ ಘಟನೆ ಬಗ್ಗೆ ಹೆಚ್ಚಿನ ತನಿಖೆ ನಡೆಸಲಾಗುವುದೆಂದು ಪೊಲೀಸರು ತಿಳಿಸಿದ್ದಾರೆ.