ಕನ್ನಡ ಚಿತ್ರರಂಗದಲ್ಲಿ ‘ಮುಂಗಾರುಮಳೆ’ಯ ಮೂಲಕ ಯಶಸ್ಸಿನ ಹೊಸ ಇತಿಹಾಸ ಸೃಷ್ಟಿಸಿದ ಸ್ಯಾಂಡಲ್ ವುಡ್ ನ ಬಹು ಬೇಡಿಕೆಯ ಜೋಡಿ ಗಣೇಶ್ ಮತ್ತು ಯೋಗರಾಜ್ ಭಟ್ ಇವರ ‘ಗಾಳಿಪಟ’ದ ನಂತರ ಇದೀಗ ಮೂರನೇ ಚಿತ್ರ “ಮುಗುಳುನಗೆ”ಯ ಚಿತ್ರೀಕರಣವು ಇತ್ತೀಚೆಗೆ ಬೊಮ್ಮನಹಳ್ಳಿಯ ಪಂಚಮುಖಿ ದೇವಸ್ಥಾನದಲ್ಲಿ ಚಿತ್ರದ ಪ್ರಥಮ ದೃಶ್ಯವನ್ನು ವಿನಾಯಕ ಸ್ವಾಮಿ ದೇವಸ್ಥಾನದಲ್ಲಿ ಚಿತ್ರೀಕರಿಸಲಾಯಿತು.
ಬೆಂಗಳೂರು, ಮೈಸೂರು, ಉತ್ತರ ಕನ್ನಡ ಪಾಂಡಿಚೇರಿ, ದಕ್ಷಿಣ ಕನ್ನಡ, ಇನ್ನಿತರ ಕಡೆಗಳಲ್ಲಿ ಚಿತ್ರೀಕರಣ ನಡೆಯಲಿದ್ದು, ಯೋಗರಾಜ್ ಮೂವೀಸ್, ಗೋಲ್ಡನ್ ಮೂವೀಸ್ ಮತ್ತು ಎಸ್.ಎಸ್. ಫಿಲ್ಮ್ಸ್ ಜಂಟಿಯಾಗಿ ಈ ಚಿತ್ರವನ್ನು ನಿರ್ಮಿಸುತ್ತಿದೆ.
ಈ ಚಿತ್ರದಲ್ಲಿ ನಾಯಕ ಗಣೇಶ್ ಗೆ ನಾಯಕಿಯರಾಗಿ ಅಮೂಲ್ಯಾ, ಆಶಿಕಾ, ನಿಖಿತಾ ನಾರಾಯಣ್ ಅಭಿನಯಿಸಲಿದ್ದು, ಅನಂತ್ ನಾಗ್, ಅಚ್ಯುತ್ ಕುಮಾರ್ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರಕ್ಕೆ ವಿ.ಹರಿಕೃಷ್ಣ ಸಂಗೀತವಿದೆ. ನಿರ್ದೇಶನದ ಜೊತೆಗೆ ಕಥೆ, ಚಿತ್ರಕಥೆ, ಸಂಭಾಷಣೆಯನ್ನು ಯೋಗರಾಜ್ ಭಟ್ ಬರೆದಿದ್ದಾರೆ.