ಹೊಸದಿಲ್ಲಿ: ಪಾಕಿಸ್ತಾನ ಚಿತ್ರ ಪ್ರದರ್ಶಕರ ಸಂಘ ಭಾರತೀಯ ಚಲನಚಿತ್ರಗಳ ಪ್ರದರ್ಶನಕ್ಕೆ ಹೇರಿದ್ದ ನಿಷೇಧವನ್ನು ರದ್ದುಗೊಳಿಸಿದೆ.
ಸಿನಿಮಾ ಪ್ರದರ್ಶಕರ ಸಂಘದ ಅಧ್ಯಕ್ಷ ಜೋರೈಶಿ ಲಾಶರಿ ಅವರು ಡಿಸೆಂಬರ್ 19 ರಿಂದ ಭಾರತೀಯ ಸಿನಿಮಾಗಳ ಪ್ರದರ್ಶನ ಶುರುವಾಗಲಿದೆ ಎಂದು ಹೇಳಿದ್ದಾರೆ. ನವಾಜುದ್ದೀನ್ ಸಿದ್ದಿಕಿ, ಅರ್ಬಾಜ್ ಖಾನ್ ಅಭಿನಯದ ಸೊಹೈಲ್ ಖಾನ್ ನಿರ್ದೇಶನದ ಫ್ರೀಕಿ ಅಲಿ ಸಿನಿಮಾ ಪ್ರದರ್ಶನವಾಗಲಿದೆ. ಈ ಸಿನೆಮಾ ಪ್ರದರ್ಶನದ ನಂತರ ಸರ್ಕಾರ ಹಾಗೂ ಜನರ ಪ್ರತಿಕ್ರಿಯೆ ನೋಡಿ ದಂಗಾಲ್ ಸಿನಿಮಾ ಬಿಡುಗಡೆ ಮಾಡುವ ಯೋಜನೆಯಿದೆ.
ಉರಿ ಉಗ್ರರ ದಾಳಿಯ ನಂತರ ಉಭಯ ದೇಶಗಳ ಪರಿಸ್ಥಿತಿ ಹದಗೆಟ್ಟಿದ್ದರಿಂದ ಭಾರತೀಯ ಸಿನಿಮಾಗಳ ಪ್ರದರ್ಶನವನ್ನು ಪಾಕಿಸ್ತಾನ ಸ್ಥಗಿತಗೊಳಿಸಿತ್ತು.