ಭಾರತ ಚಿತ್ರರಂಗದ ಇತಿಹಾಸದಲ್ಲೇ ಎಲ್ಲರೂ ಆತುರದಿಂದ ಕಾಯುತ್ತಿರುವ ಬಾಹುಬಲಿ 2 ಮುಂದಿನ ವರ್ಷ ರಿಲೀಸ್ ಆಗಲಿದೆಯೆಂಬುದು ಎಲ್ಲರಿಗೂ ತಿಳಿದ ಸಂಗತಿ. ಆದರೆ ಸಿನಿಮಾತಂಡ ಈಗ ಬಾಹುಬಲಿ-2 ರ ಪ್ರಮುಖ ಪಾತ್ರಧಾರಿಗಳಾದ ಪ್ರಭಾಸ್ ಹಾಗೂ ರಾಣಾ ದಗ್ಗುಬಾಟಿಯ ಪೋಸ್ಟರ್ ನ್ನು ಬಿಡುಗಡೆಮಾಡಿದೆ.
ಈಗ ಸಾಮಾಜಿಕ ಜಾಲ ತಾಣಗಳಲ್ಲಿ ಸಿನಿಮಾತಂಡ ಬಾಹುಬಲಿ-2 ರ ಮುಖ್ಯ ಪಾತ್ರಧಾರಿಗಳಾದ ಪ್ರಭಾಸ್ ಹಾಗೂ ರಾಣಾ ದಗ್ಗುಬಾಟಿಯ ಲುಕ್ ನ್ನು ಹೊರಹಾಕಿದೆ.
ಈ ಮೂಲಕ ಖಳನಟನ ಪಾತ್ರಧಾರಿಯಾದ ರಾಣಾ ದಗ್ಗುಬಾಟಿ ಬಾಹುಬಲಿ-2 ರಲ್ಲಿ ಹೇಗೆ ಕಾಣಿಸಲಿದ್ದಾರೆ ಎಂಬ ಸ್ಪಷ್ಟ ಚಿತ್ರಣ ಚಿತ್ರರಸಿಕರಿಗೆ ಸಿಕ್ಕಂತಾಗಿದೆ.
ಈ ಹಿಂದೆಯೇ ಪ್ರಭಾಸ್ ಪೋಸ್ಟರ್ನ್ನು ಚಿತ್ರತಂಡ ಬಿಡುಗಡೆಮಾಡಿದ್ದು, ಇದೀಗ ರಾಣಾ ದಗ್ಗುಬಾಟಿ ಪೋಸ್ಟರ್ ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡುತ್ತಿದೆ.