ಬಾಲಿವುಡ್ ಬೇಗಂ ಕರೀನಾ ಕಪೂರ್ ಮುಂಬೈಯ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ಇಂದು ಬೆಳಗ್ಗೆ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.
ಬಾಲಿವುಡ್ ನಲ್ಲಿ ನಟಿಯಾಗಿ ತನ್ನ ಛಾಪು ಮೂಡಿಸಿದ್ದ ಕರೀನಾ ಗರ್ಭಿಣಿಯಾದ ಬಳಿಕವೂ ಕೆಲಸಗಳಿಗೆ ವಿರಾಮ ಹೇಳಿರಲಿಲ್ಲ. ರ್ಯಾಂಪ್ ಮೇಲೆ ನಡಿಗೆ, ಫೋಟೋ ಶೂಟ್, ಮ್ಯಾಗಜಿನ್ ಮುಖಪುಟಕ್ಕೆ ಫೋಸ್ ಕೊಟ್ಟು ಎಲ್ಲರ ಗಮನ ಸೆಳೆದಿದ್ದರು. ಹೆರಿಗೆಯ ಅಂತಿಮ ದಿನಗಳವರೆಗೂ ಚಟುವಟಿಕೆ, ಲವಲವಿಕೆಯಿಂದ ಓಡಾಡುತ್ತಿದ್ದರು.
ಹೆರಿಗೆ ಸಂದರ್ಭದಲ್ಲಿ ಪತಿ ಸೈಫ್ ಆಲಿ ಖಾನ್ ಸೇರಿದಂತೆ ಇಡೀ ಖಾನ್ ಮತ್ತು ಕರೀನಾ ಕುಟುಂಬದವರು ಕರೀನಾ ಪಕ್ಕದಲ್ಲಿದ್ದರಂತೆ. ”ತಾಯಿ ಮತ್ತು ಮಗು ಇಬ್ಬರೂ ಆರೋಗ್ಯವಾಗಿದ್ದಾರೆ. ನಮಗೆ ಬಹಳ ಸಂತೋಷವಾಗುತ್ತಿದೆ.” ಎಂದು ಕರೀನಾರ ತಂದೆ ರಣಧೀರ್ ಕಪೂರ್ ಹೇಳಿದ್ದಾರೆ.