ಬೆಂಗಳೂರು: ಕನ್ನಡ, ತಮಿಳು, ತೆಲುಗು, ಮಲೆಯಾಳಂ ಭಾಷೆಯ ಹಲವು ಚಿತ್ರಗಳಲ್ಲಿ ನಟಿಸಿರುವ ಬಹುಭಾಷಾ ನಟಿ ಭಾವನಾ ಸದ್ಯದಲ್ಲೇ ದಾಂಪತ್ಯ ಜೀವನಕ್ಕೆ ಎಂಟ್ರಿ ಕೊಡಲಿದ್ದಾರೆ.
ಭಾವನಾ ಮದುವೆಯ ದಿನಾಂಕವನ್ನು ನಾವಿನ್ನು ನಿಗದಿಪಡಿಸಲಿಲ್ಲ, ಆದರೆ ಭಾವನಾ ಮದುವೆ ವಿಚಾರವಾಗಿ ನಮಗೂ ತಿಳಿದಿರದ ಹಲವು ಸಂಗತಿಗಳನ್ನು ಮಾಧ್ಯಮಗಳು ಹರಿ ಬಿಟ್ಟಿವೆ. ಈ ಬಗ್ಗೆ ಮತ್ತಷ್ಟು ವಿಚಾರಗಳನ್ನು ತಿಳಿಯುವ ಕಾತರದಲ್ಲಿದ್ದೇನೆ’ ಎಂದು ಸ್ವತಃ ಭಾವನ ತಾಯಿ ಪುಷ್ಪಾ ಹೇಳಿದ್ದು, ಮದುವೆಯ ಸುದ್ದಿಯನ್ನು ಖಚಿತಪಡಿಸಿದ್ದಾರೆ.
ಆಕೆಯ ತಂದೆ ಬದುಕಿದ್ದಾಗಲೇ ಭಾವನಾ ಮದುವೆಯನ್ನು ನಿರ್ಧಾರ ಮಾಡಿದ್ದು, ದಿನಾಂಕ ಗೊತ್ತು ಮಾಡಿರಲಿಲ್ಲ, ಮದುವೆಯ ಸುದ್ದಿಯನ್ನು ಆದಷ್ಟು ಬೇಗ ತಿಳಿಸಲಿದ್ದೇವೆ ಎಂದಿದ್ದಾರೆ.
ಸೂಪರ್ ಹಿಟ್ ಚಿತ್ರ ‘ಜಾಕಿ’ಯಲ್ಲಿ ಪುನೀತ್ ರಾಜ್ಕುಮಾರ್ ಜೊತೆ ನಟಿಸುವ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ನಂತರ ಕಿಚ್ಚ ಸುದೀಪ್ ಜೊತೆ ‘ವಿಷ್ಣುವರ್ಧನ’, ಗಣೇಶ್ ಜೊತೆ ‘ರೋಮಿಯೋ’ ದಲ್ಲಿ ನಾಯಕಿಯಾಗಿ ಕನ್ನಡ ಚಿತ್ರರಸಿಕರ ಮನಸೂರೆ ಮಾಡಿದ ಈ ಚೆಲುವೆ, ಇದೀಗ ಹಸೆಮಣೆ ಏರಲು ಹೊರಟಿರುವುದು ‘ರೋಮಿಯೋ’ ಚಿತ್ರ ನಿರ್ಮಾಪಕ ನವೀನ್ ಜೊತೆ.
2012ರಲ್ಲಿ ‘ರೋಮಿಯೋ’ ಚಿತ್ರದ ಶೂಟಿಂಗ್ ವೇಳೆ ನವೀನ್ ರನ್ನು ಮೊದಲು ಭೇಟಿಯಾದ ಭಾವನಾ, ಮದುವೆಯ ಬಗ್ಗೆ ಈವರೆಗೂ ಗುಟ್ಟು ಬಿಟ್ಟುಕೊಟ್ಟಿರಲಿಲ್ಲ. ಸದ್ಯ ಭಾವನಾ ಮಲಯಾಳಂನ ‘ಹನೀ ಬೀ’ ಚಿತ್ರದ ಎರಡನೇ ಭಾಗದ ಶೂಟಿಂಗ್ನಲ್ಲಿ ಬ್ಯುಸಿಯಾಗಿದ್ದಾರೆ.