‘ಜಂಭದ ಹುಡುಗಿ’ ಚಿತ್ರದ ಮೂಲಕ ಕನ್ನಡ ಚಿತ್ರರಂಗದಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿದ ಪ್ರಿಯಾ ಹಾಸನ್ ಇದೀಗ “”ಸ್ಮಗ್ಲರ್” ಆಗಿ ಬಂದಿದ್ದಾರೆ.
ಹೌದು ಈ ತರ ಸುದ್ದಿ ಬಂದಿರುವುದು ನಿಜ…ಆದರೆ ಇದರಲ್ಲಿ ಶಾಕ್ ಆಗುವುದು ಏನಿಲ್ಲ. ಯಾಕಂದರೆ “ಸ್ಮಗ್ಲರ್” ಅನ್ನುವುದು ಪ್ರಿಯಾ ಅವರು ನಾಯಕಿ ಆಗಿ ಅಭಿನಯಿಸುತ್ತಿರುವ ಮುಂದಿನ ಚಿತ್ರ. ಮದುವೆಯ ನಂತರ ಪ್ರಿಯಾ ಅಭಿನಯಿಸುತ್ತಿರುವ ಚಿತ್ರ ಇದಾಗಿದ್ದು, ಸುಮನ್ ಈ ಚಿತ್ರದಲ್ಲಿ ನಾಯಕನಾಗಿ ನಟಿಸುತ್ತಿದ್ದಾರೆ.
ಪ್ರಿಯಾ ಮೊದಲಿಗಿಂತ ಒಂದಷ್ಟು ಫಿಟ್ ಆದಂತೆ ಕಾಣುತ್ತಿದ್ದು, ‘ದಮ್ ನಕ ನಕ’ ಎನ್ನುವ ಜಬರದಸ್ತ್ ಹಾಡಿನ ಮೂಲಕ ಗಮನ ಸೆಳೆಯುತ್ತಿದ್ದು, ಪ್ರಿಯಾ ಅವರ ಹಿಂದಿನ ಚಿತ್ರಗಳಂತೆ ಇಲ್ಲಿಯೂ ಕಥೆ ನಾಯಕಿಯ ಸುತ್ತವೇ ಸುತ್ತುತ್ತದೆ.
ಫ್ಯಾಮಿಲಿ ಎಂಟರ್ಟೇನ್ಮೆಂಟ್ ಜೊತೆ ಸಸ್ಪೆನ್ಸ್ ಥ್ರಿಲ್ಲರ್ ಕೂಡ ಇರುವುದು ಈ ಚಿತ್ರದ ಸ್ಪೆಷಾಲಿಟಿ ಆಗಿದ್ದು, ವೀರು ಕೆ ನಿರ್ದೇಶನವಿದ್ದು, ನಾಯಕಿ ಪ್ರಿಯಾ ಹಾಸನ್ ‘ಸ್ಮಗ್ಲರ್’ಗೆ ಹಣ ಹಾಕಿದ್ದಾರೆ.