ಮುಂಬೈ: ಅಮೀರ್ ಅಭಿನಯದ ಬಹುನಿರೀಕ್ಷೆಯ ಚಿತ್ರ ನಿರೀಕ್ಷೆಯಂತೆಯೇ ಭರ್ಜರಿ ಯಶಸ್ಸು ಗಳಿಸಿದ್ದು, ಇದೀಗ ಕೇವಲ ಮೂರೇ ದಿನಗಳಲ್ಲಿ 100 ಕೋಟಿ ಗಳಿಕೆ ಮಾಡಿ ಹೊಸ ಇತಿಹಾಸ ಸೃಷ್ಟಿಸುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ.
ಈ ಹಿಂದೆ ಅಮೀರ್ ಅಭಿನಯದ ಗಜನಿ, 3 ಈಡಿಯೆಟ್ಸ್, ಧೂಮ್ 3, ಹಾಗೂ ಪಿಕೆ, ಅತೀ ಹೆಚ್ಚು ಗಳಿಕೆಯ ಸಿನಿಮಾಗಳಾಗಿದ್ದು, ಇದೀಗ ಈ ಪಟ್ಟಿಗೆ ದಂಗಲ್ ಸಿನಿಮಾ ಸೇರ್ಪಡೆಯಾಗಿದೆ.
ಬಾಕ್ಸ್ ಆಫೀಸ್ ವಿಶ್ಲೇಷಣೆ ಮಾಡುವ ತರಣ್ ಆದರ್ಶ್ ಹೇಳುವಂತೆ, ಮೊದಲ ವಾರದಲ್ಲಿಯೇ 106.95 ಕೋಟಿಯನ್ನು ದಂಗಲ್ ಸಿನಿಮಾ ಗಳಿಸಿದೆ.