ತುಮಕೂರು: ಸ್ಯಾಂಡಲ್ ವುಡ್ ನಟ ಕಿಚ್ಚ ಸುದೀಪ್ ತನ್ನ ಆಪ್ತ ಸಹಾಯಕನ ಮಗಳ ಜನ್ಮದಿನಕ್ಕೆ ಜಿಲ್ಲೆಯ ಶಿರಾ ತಾಲೂಕಿನ ಗಡಿಯಲ್ಲಿರುವ ಪುಟ್ಟ ಗ್ರಾಮ ದಂಡಿಕೆರೆಗೆ ಭೇಟಿ ನೀಡಿ ಹುಟ್ಟುಹಬ್ಬ ಸಂಭ್ರಮದಲ್ಲಿ ಪಾಲ್ಗೊಂಡರು.
ನಟ ಸುದೀಪ್ ಬಳಿ ಆಪ್ತ ಸಹಾಯಕನಾಗಿ ಆಪ್ತ ಸಹಾಯಕನಾಗಿ ಧನಂಜಯ ಎಂಬಾತ ನಿಷ್ಠೆ, ಪ್ರಾಮಾಣಿಕತೆಯಿಂದ ಕೆಲಸ ಮಾಡುತ್ತಿದ್ದರು. ಒಂದು ದಿನ ಆಕಸ್ಮಿಕವಾಗಿ ಧನಂಜಯ ಸಾವನ್ನಪ್ಪಿದ್ದರು. ಈ ನೋವಿಗೆ ಸ್ಪಂದಿಸಿದ ಸುದೀಪ್ ಧನಂಜಯ್ಯನ ಸಹೋದರ ಪಾರ್ಥನಿಗೆ ಆಪ್ತ ಸಹಾಯಕನ ಕೆಲಸ ನೀಡಿದ್ದರು. ಇವತ್ತು ಧನಂಜಯ ಅವರ ಮಗಳ 7ನೇ ವರ್ಷದ ಹುಟ್ಟುಹಬ್ಬವನ್ನು ಆತನ ಕುಟುಂಬದ ಜತೆ ಆಚರಿಸಿಕೊಂಡರು.
ದಂಡಿಕೆರೆಗೆ ಸುದೀಪ್ ಆಗಮಿಮಿಸುತ್ತಿದ್ದಂತೆ ನೂರಾರು ಅಭಿಮಾನಿಗಳು ಸೇರಿಕೊಂಡು ಸುದೀಪ್ ನನ್ನು ಸ್ವಾಗತಿಸಿದರು. ವಿಶೇಷವಾಗಿ ಗ್ರಾಮದ ಯುವಕರು ಡೊಳ್ಳು ಕುಣಿತದ ಮೂಲಕ ಬರಮಾಡಿಕೊಂಡರು.