ಮುಂಬೈ: ಬಾಲಿವುಡ್ ನಟ ಶಾಹಿದ್ ಕಪೂರ್-ಮೀರಾ ರಾಜಪುತ್ ದಂಪತಿಗೆ ಹೆಣ್ಣು ಮಗು ಜನಿಸಿದ್ದು, ತನ್ನ ಮಗಳ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಇದೇ ಮೊದಲ ಬಾರಿಗೆ ಹಾಕಿದ್ದಾರೆ.
ಆಗಸ್ಟ್ 26 ರಂದು ಮಿಶಾ ಜನಿಸಿದ್ದು, ಭಾನುವಾರ ಪ್ರಸಾರವಾಗಲಿರುವ ಕರಣ್ ಜೋಹರ್ ಅವರ ‘ಕಾಫಿ ವಿಥ್ ಕರಣ್’ ಕಾರ್ಯಕ್ರಮದಲ್ಲಿ ಶಾಹಿದ್ ದಂಪತಿಗಳು ಜೊತೆಯಾಗಿ ಕಾಣಿಸಿಕೊಳ್ಳಲಿದ್ದಾರೆ.
ಇನ್ಸ್ಟಾಗ್ರಾಮ್ ಮೂಲಕ ತನ್ನ ಮಗಳ ಫೋಟೋ ಹಂಚಿಕೊಂಡಿದ್ದು, ಮಗಳ ಮುಖವನ್ನು ತೋರಿಸದೆ, ಮಿಶಾಳ ಪುಟ್ಟ ಪಾದಗಳ ಫೋಟೋ ಅನ್ನು ಮಾತ್ರ ಶಾಹಿದ್ ಹಾಕಿದ್ದಾರೆ.
ಸಂಜಯ್ ಲೀಲಾ ಭನ್ಸಾಲಿಯವರ ಪದ್ಮಾವತಿ ಹಾಗೂ ವಿಶಾಲ್ ಭಾರದ್ವಾಜ್ ಅವರ ರಂಗೂನ್ ಶೂಟಿಂಗ್ ನಲ್ಲಿ ಸದ್ಯ ಶಾಹಿದ್ ಬಿಜ್ಹಿಯಾಗಿದ್ದಾರೆ.