News Kannada
Thursday, February 02 2023

ಮನರಂಜನೆ

ಜನಮನದ ಕದ ತಟ್ಟಿದ “ಕುಡಿಕಾರಂಡ ಬಂಡಾಟ”

Photo Credit :

ಜನಮನದ ಕದ ತಟ್ಟಿದ ``ಕುಡಿಕಾರಂಡ ಬಂಡಾಟ''

ಕುಡಿತದ ಸುತ್ತ ನೇಯ್ದ ಕಥಾವಸ್ತುವನ್ನು ನೇಯ್ದು ಅದನ್ನು ನಾಟಕದ ಮೂಲಕ ಪ್ರಸ್ತುತ ಪಡಿಸುವುದರೊಂದಿಗೆ ನಗು, ತಮಾಷೆಯೊಂದಿಗೆ ಒಂದಷ್ಟು ಗಂಭೀರ ವಿಚಾರಗಳನ್ನು ಸಮಾಜಕ್ಕೆ ತಲುಪಿಸುವಲ್ಲಿ ಮೂರ್ನಾಡು ಕಾಲೇಜು ವಿದ್ಯಾರ್ಥಿಗಳು ಪ್ರದರ್ಶಿಸಿದ “ಕುಡಿಕಾರಂಡ ಬಂಡಾಟ” ನಾಟಕ ಯಶಸ್ವಿಯಾಯಿತು.
ಸಾಹಿತಿ ಹಾಗೂ ರಂಗಭೂಮಿ ಕಲಾವಿದ ಐತಿಚಂಡ ರಮೇಶ್ ಉತ್ತಪ್ಪ ರಚಿಸಿ ನಿರ್ದೇಶಿಸಿರುವ ಕೊಡವ ನಾಟಕ ಇದಾಗಿದ್ದು, ಪ್ರೇಕ್ಷಕರ ಮನ ಗೆಲ್ಲುವಲ್ಲಿ ಯಶಸ್ವಿಯಾಯಿತು. ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ನಾಟಕ ತರಬೇತಿ ಶಿಬಿರದಲ್ಲಿ ತಯಾರಾದ ಈ ನಾಟಕ ವಿಭಿನ್ನ ಕಥಾವಸ್ತು ಹಾಗೂ ಕೊನೆಯಲ್ಲಿ ಮದ್ಯವ್ಯಸನದಿಂದ ಹೇಗೆ ನಮ್ಮ ಬದುಕು ಅಧೋಗತಿಗೆ ಇಳಿಯುತ್ತದೆ ಎನ್ನುವುದನ್ನು ಮಾರ್ಮಿಕವಾಗಿ ರಂಗದ ಮೇಲೆ ತೆರೆದಿಡಲಾಯಿತು.
ಸಂದೇಶದಿಂದಲೇ ನಾಟಕ ಆರಂಭವಾಗದೆ, ಸ್ಥಳೀಯ ಸಂಸ್ಕೃತಿಯ ಪ್ರತಿಬಿಂಬವಾಗಿರುವ ಬೊಳಕಾಟ್, ಉಮ್ಮತ್ತಾಟ್, ಕೈಲ್ ಮುಹೂರ್ತದ ನಂತರ ನಡೆಯುತ್ತಿದ್ದ ಕಾಡು ಬೇಟೆ, ಯುವತಿಯರು ಪೂಜೆಗೆ ಕಾಡು ಹೂಗಳನ್ನು ಹೆಕ್ಕುವಲ್ಲಿನ ಸಂಭ್ರಮ, ಅಪ್ಪಚ್ಚಕವಿಯ ಬೊಳ್ಳೆಕಳ್ಳ್ ಹಾಡಿನ ನೃತ್ಯ ಇವೆಲ್ಲವೂ ನಾಟಕಕ್ಕೆ ಮತ್ತಷ್ಟು ಮೆರಗು ನೀಡಿತು.

ವಿಭಿನ್ನ ಪರಿಕಲ್ಪನೆಯಲ್ಲಿ ಪಾತ್ರಧಾರಿಗಳ ಆಗಮನ, ಸಂಭಾಷಣೆ ಪ್ರೇಕ್ಷಕರ ಮನ ಸೆಳೆಯಿತು. ವಿದ್ಯಾರ್ಥಿಗಳು ಬಸ್ ನಲ್ಲಿ ಪ್ರಯಾಣಿಸುವಾಗ ಶೌಚಾಲಯಕ್ಕೆ ತೆರಳಬೇಕಾದ ತುರ್ತು, ಹೊಟ್ಟೆ ಕರಗಿಸಲು ಪಡುವ ಪಡಿಪಾಟಲನ್ನು ಅದ್ಭುತವಾಗಿ ನಟಿಸಿ ನಗೆಗಡಲಿನಲ್ಲಿ ತೇಲಿಸಿದರು. ಮಗ ಕುಡಿಯುತ್ತಿದ್ದರೂ ಸೊಸೆಯೊಂದಿಗೆ ಸಮರ್ಥಿಸಿಕೊಳ್ಳುವ ಅತ್ತೆ, ತನ್ನ ಪತಿಯ ಕುಡಿತದ ಚಟವನ್ನು ಬಿಡಿಸಲು ಪತ್ನಿಯ ಯತ್ನ, ದಿಢೀರನೆ ಪ್ರವೇಶ ನೀಡುವ ಅಪರಿಚಿತ, ಕೊನೆಗೆ ಎಲ್ಲವನ್ನೂ ಕಳೆದುಕೊಳ್ಳುವ ಕುಟುಂಬ… ಇದು ನಾಟಕದ ಕಥಾವಸ್ತು.

ಆರಂಭದಲ್ಲಿ ಹಾಸ್ಯವೇ ಪ್ರಧಾನವಾಗಿ ಕಂಡರೂ ಕೊನೆಯಲ್ಲಿ ಮರೆಯಲಾಗದ ಸಂದೇಶವೊಂದನ್ನು ನೀಡುತ್ತದೆ. ಪ್ರತಿಯೊಬ್ಬ ಪಾತ್ರಧಾರಿಯೂ ಮನ ಮುಟ್ಟುವಂತೆ ಮದ್ಯವ್ಯಸನದ ಪರಿಣಾಮವನ್ನು ಹೇಳುತ್ತಾರೆ. ಒಟ್ಟಿನಲ್ಲಿ ನಾಟಕ ನೆರೆದಿದ್ದ ಸಾವಿರಾರು ಪ್ರೇಕ್ಷಕರು ತಲೆದೂಗುವಂತೆ ಮಾಡಿದ್ದಂತು ಸತ್ಯ. ಐತಿಚಂಡ ರೇಷ್ಮಾ ರಮೇಶ್ ವಸ್ತ್ರ ವಿನ್ಯಾಸ ಮಾಡಿದರೆ, ಚೇಂದಿರ ನಿರ್ಮಲ ಬೋಪಣ್ಣ, ಮದ್ರಿರ ಸಂಜುಬೆಳ್ಯಪ್ಪ, ಶ್ರೀನಿವಾಸ್ ಅವರ ಸಂಗೀತ ಗಮನಸೆಳೆಯಿತು

See also  ‘ಅಶೆಂ ಜಾಲೆಂ ಕಶೆಂ’ ಹಳೇ ಕಥೆಯ ಹೊಸ ಸಿನಿಮಾ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು