News Kannada
Monday, February 06 2023

ಮನರಂಜನೆ

ಶೆಟ್ಟರ ‘ಮಾಲ್ಗುಡಿ’ಯಲ್ಲಿ ಕಿಚ್ಚನ ದರೋಡೆ

Photo Credit :

ಶೆಟ್ಟರ ‘ಮಾಲ್ಗುಡಿ’ಯಲ್ಲಿ ಕಿಚ್ಚನ ದರೋಡೆ

‘ಉಳಿದವರು ಕಂಡಂತೆ’ ಚಿತ್ರದ ಮೂಲಕ ವಿಭಿನ್ನ ನಿರ್ದೇಶಕನಾಗಿ ಹೆಸರು ಗಳಿಸಿರುವ ರಕ್ಷಿತ್ ಶೆಟ್ಟಿಯವರ ಇತ್ತೀಚಿನ ಚಿತ್ರ ‘ಕಿರಿಕ್ ಪಾರ್ಟಿ’ ಬಿಡುಗಡೆ ಕಂಡಲೆಲ್ಲಾ ಭರ್ಜರಿ ಪ್ರದರ್ಶನ ಕಾಣುತ್ತಾ ಬಾಕ್ಸಾಫೀಸನ್ನು ಕೊಳ್ಳೆ ಹೊಡೆದಿರುವುದು ಹಳೇ ಸಂಗತಿಯಾಗುತ್ತಿದ್ದಂತೆ, ಶೆಟ್ಟರ ಮುಂದಿನ ಸಿನೆಮಾ ‘ಥಗ್ಸ್ ಆಫ್ ಮಾಲ್ಗುಡಿ’ಯಲ್ಲಿ ಕಿಚ್ಚ ದರೋಡೆಕೋರನ ಪಾತ್ರದಲ್ಲಿ ನಟಿಸುತ್ತಿರುವ ಬಗ್ಗೆ ಹಿಂದೊಮ್ಮೆ ಕೇಳಿರುವುದಾದರೂ ಹೊಸ ವಿಷಯ ಏನಪ್ಪಾ ಅಂದ್ರೆ ‘ಥಗ್ಸ್ ಆಫ್ ಮಾಲ್ಗುಡಿ’ ಚಿತ್ರ ಕನ್ನಡದ ಜೊತೆಯಲ್ಲೇ ತಮಿಳು, ತೆಲುಗು ಮತ್ತು ಹಿಂದಿ ಭಾಷೆಯಲ್ಲಿಯೂ ಸೆಟ್ಟೇರಲಿದೆಯಂತೆ. ಉಳಿದವರು ಕಂಡಂತೆ ಮತ್ತು ಕಿರಿಕ್ ಪಾರ್ಟಿ ಚಿತ್ರಗಳನ್ನು ನೋಡಿ ಮೆಚ್ಚಿರುವ ಕಿಚ್ಚ, ರಕ್ಷಿತ್ ಸಿನೆಮಾದಲ್ಲಿ ನಟಿಸಲು ಉತ್ಸುಕರಾಗಿರುವುದು ಕನ್ನಡ ಸಿನೆಮಾ ರಂಗದಲ್ಲೊಂದು ಮಹತ್ತರವಾದ ಬೆಳವಣಿಗೆಯೆಂದೇ ಹೇಳಬಹುದು.

ಇತ್ತೀಚಿನ ದಿನಗಳಲ್ಲಿ ಪರಭಾಷಾ ಸಿನೆಮಾ ರಂಗಗಳಂತೆ ನಮ್ಮ ಸ್ಟಾರ್ ನಟರೂ ತಮ್ಮ ಇಮೇಜನ್ನು ಬದಿಗಿಟ್ಟು ಸೃಜನಶೀಲ ಯುವನಿರ್ದೇಶಕರ ಬೆನ್ನುಬಿದ್ದಿರುವುದು ಸ್ಯಾಂಡಲ್ ವುಡ್ಡಿನ ಅಂಗಳದಲ್ಲಿ ಸೃಜನಶೀಲ ಕೃಷಿಗೆ ನಾಂದಿ ಹಾಡಿರುವುದು ಮಾತ್ರವಲ್ಲದೆ ಸ್ಟಾರ್ ಗಳ ಅಭಿಮಾನಿಗಳು ತಮ್ಮ ಮನಸ್ಥಿತಿಯನ್ನು ಬದಲಾಯಿಸಿ ಹೊಸತನಕ್ಕೆ ಒಗ್ಗಿಕೊಳ್ಳಲು ಕೂಡ ಸಹಕಾರಿಯಾಗಲಿದೆ.

ಕಿರಿಕ್ ಪಾರ್ಟಿ ಯಶಸ್ಸಲ್ಲಿ ತೇಲುತ್ತಿರುವ ಶೆಟ್ಟರು ಮುಂದಿನ ಸಿನೆಮಾದಲ್ಲಿ ಪರಭಾಷಾ ಸಿನೆಮಾಗಳ ಸ್ಪೂರ್ತಿಗಿಂತ ಹೆಚ್ಚಾಗಿ ತಮ್ಮ ಸ್ವಂತಿಕೆಯನ್ನು ಪ್ರದರ್ಶಿಸಿ ಮತ್ತೊಂದು ಹೊಸತಾದ ಅತ್ಯದ್ಭುತ ಸಿನೆಮಾವನ್ನು ನೀಡಲಿ. ಕಿಚ್ಚನ ಕೆಪ್ಯಾಸಿಟಿ, ಶೆಟ್ಟರ ಕ್ರಿಯೇಟಿವಿಟಿ ಎರಡೂ ಸೇರಿ ‘ಥಗ್ಸ್ ಆಫ್ ಮಾಲ್ಗುಡಿ’ ವಿಶ್ವಸಿನೆಮಾರಂಗವೇ ಕನ್ನಡದೆಡೆಗೆ ತಿರುಗಿ ನೋಡುವಂತೆ ಮಾಡಲಿ ಎಂಬುವುದು ‘ನ್ಯೂಸ್ ಕನ್ನಡ’ ದ ಆಶಯ.

See also  ರಾಂಧವ ಸಿನಿಮಾದಲ್ಲಿ ಭುವನ್ ನಾಯಕ!
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು