ಹೊಸದಿಲ್ಲಿ: ‘ಖೈದಿ ನಂ 150’ ಮೆಗಾಸ್ಟಾರ್ ಚಿರಂಜೀವಿ ಅಭಿನಯದ ಬಹುನಿರೀಕ್ಷಿತ ಚಿತ್ರ ಬಿಡುಗಡೆಯಾದ ವಾರದಲ್ಲೇ 100 ಕೋಟಿ ಗಳಿಸಿ, ಭರ್ಜರಿ ಯಶಸ್ಸು ಕಾಣುತ್ತಿದೆ.
ಈ ಚಿತ್ರದಲ್ಲಿ ಕಾಜಲ್ ಅಗರವಾಲ್ ನಾಯಕಿಯಾಗಿ ನಟಿಸಿದ್ದು, ತಮಿಳಿನ ‘ಕತ್ತಿ’ ಚಿತ್ರದ ರಿಮೇಕ್ ಇದಾಗಿದೆ. ಸಂಕ್ರಾಂತಿಯ ಎರಡು ದಿನದ ರಜೆಯ ಅವಧಿಯಲ್ಲಿ 50 ಕೋಟಿಗೂ ಹೆಚ್ಚು ಬಾಕ್ಸ್ ಆಫೀಸ್ ಗಳಿಕೆ ಮಾಡಿದೆ.
‘ಖೈದಿ ನಂ 150’ ಜಗತ್ತಿನಾದ್ಯಂತ ಏಕ ಕಾಲಕ್ಕೆ ಬಿಡುಗಡೆಯಾಗಿ ಇಲ್ಲಿವರೆಗೆ 106 ಕೋಟಿ ಗಳಿಸಿದೆ. ಚಿರಂಜೀವಿ ಅವರ ವೃತ್ತಿ ಬದುಕಿನ ರೀ ಎಂಟ್ರಿ ಇದಾಗಿದ್ದು, ಈ ಚಿತ್ರಕ್ಕೆ ಮಗ ರಾಮ್ ಚರಣ್ ಬಂಡವಾಳ ಹೂಡಿದ್ದರು.