ಇಂದು ದುನಿಯಾ ವಿಜಯ್ 43ನೇ ಹುಟ್ಟಿದ ಹಬ್ಬದ ಸಂಭ್ರಮ. ಆದರೆ ಅವರು ತಮ್ಮ ಹುಟ್ಟಿದ ಹಬ್ಬವನ್ನು ಮಾಸ್ತಿಗುಡಿ ಚಿತ್ರೀಕರಣದ ಸಂದರ್ಭದಲ್ಲಿ ದುರಂತ ಸಾವು ಕಂಡ ಗೆಳೆಯರಾದ ಅನಿಲ್-ಉದಯ್ ಸಮಾಧಿಯ ಬಳಿ ಆಚರಿಸಿದರು.
ನಮ್ಮನ್ನಗಲಿದ ಜೀವಗಳು ದೇವರಲ್ಲಿ ಲೀನವಾಗಿರುತ್ತವೆ ಎನ್ನುವ ನಂಬಿಕೆಯಿದೆ. ಅವರ ಆಶೀರ್ವಾದಕ್ಕಿಂತ ಹೆಚ್ಚಿನದೇನೂ ಇಲ್ಲ. ಹಾಗಾಗಿ ಪ್ರತಿ ಬಾರಿಯೂ ಮಧ್ಯರಾತ್ರಿ ಹುಟ್ಟುಹಬ್ಬವನ್ನು ಸ್ಮಶಾನದಲ್ಲಿ ಆಚರಿಸಿಕೊಳ್ಳೋದಾಗಿ ವಿಜಿ ಹೇಳಿದರು.
ಮಾಸ್ತಿಗುಡಿ ಚಿತ್ರದಲ್ಲಿ ದುನಿಯಾ ವಿಜಯ್ ವಿಭಿನ್ನ ಗೆಟಪ್ನಲ್ಲಿ ಕಾಣಿಸಿಕೊಂಡಿರೋದು ನಿಮಗೆಲ್ಲ ತಿಳಿದಿದೆ. ಈಗ ಚಿತ್ರದ ಟ್ರೇಲರ್ ಕೂಡ ಭರ್ಜರಿಯಾಗಿ ಮೂಡಿಬಂದಿದೆ. ಇನ್ನು ಮಾಸ್ತಿಗುಡಿ ಚಿತ್ರೀಕರಣದ ವೇಳೆ ಮೃತಪಟ್ಟ ಖಳನಟರಾದ ಅನಿಲ್ ಮತ್ತು ಉದಯ್ಗೆ ಟ್ರೇಲರ್ನ ಆರಂಭದಲ್ಲೆ ನಿರ್ಮಾಪಕ ಸುಂದರ್ ನಮನ ಸಲ್ಲಿಸಿದ್ದಾರೆ.