News Kannada
Sunday, November 27 2022

ಮನರಂಜನೆ

ಗಣರಾಜೋತ್ಸವದಂದು ತೆರೆಗೆ ಬರಲಿದೆ ಮುಂಬೈ ಚಿತ್ರ - 1 min read

Photo Credit :

ಗಣರಾಜೋತ್ಸವದಂದು ತೆರೆಗೆ ಬರಲಿದೆ ಮುಂಬೈ ಚಿತ್ರ

ಮೈಸೂರು: ಜನವರಿ 26ರ ಗಣರಾಜೋತ್ಸವದಂದು ಮುಂಬೈ ಸಿನಿಮಾ ತೆರೆಗೆ ಬರಲಿದೆ ಎಂದು ನಟ ಕೃಷ್ಣ ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದ್ದಾರೆ. ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಟ ಕೃಷ್ಣ ಅಲಿಯಾಸ್ ಡಾರ್ಲಿಂಗ್ ಕೃಷ್ಣ, ಮೈಸೂರಿನಲ್ಲಿ ಶಾಂತಲಾ ಮತ್ತ ಸಂಗಂ ಥಿಯೇಟರ್ ಗಳಲ್ಲಿ ಪ್ರದರ್ಶನಗೊಳ್ಳಲಿದ್ದು ಎಕೆ-47 ಚಿತ್ರದ ನಿರ್ದೇಶಕ ರಮೇಶ್ ಮುಂಬೈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ.

ಈ ಚಿತ್ರವು ಪ್ರೇಮ ಕಥೆ ಆಧಾರಿತವಾಗಿದ್ದು, ಸ್ವಲ್ಪ ರೌಡಿಸಂನಿಂದ ಕೂಡಿದೆ ಎಂದರು. ತನ್ನ ಜೀವನದ ಗುರಿ ಈಡೇರಿಕ್ಕಾಗಿ ಮುಂಬೈಗೆ ಹೋಗುವ ನಾಯಕನ ಅಲ್ಲಿ ಅವನು ಅನುಭವಿಸುವ ಜೀವನದ ಕಷ್ಟಗಳು ಮಧ್ಯ ಪ್ರೀತಿ ಹಾಗೂ ರೌಡಿಸಂ ಸುತ್ತ ಇರುವ ಮುಂಬೈ ಚಿತ್ರ, ಜೀವನಕ್ಕೆ ಒಂದು ಒಳ್ಳೆಯ ಸಂದೇಶವನ್ನ ನೀಡುವ ಚಿತ್ರವಾಗಿದೆ ಎನ್ನುತ್ತಾರೆ ಚಿತ್ರ ತಂಡ.  ತೇಜು ಚಿತ್ರದ ನಾಯಕಿಯಾಗಿ ನಟಿಸಿದ್ದು  ಚಿತ್ರದ ತಾರಾಗಣದಲ್ಲಿ ಬುಲೆಟ್ ಪ್ರಕಾಶ್, ರಂಗಾಯಣ ರಘು ಮತ್ತಿತರ ಹಾಸ್ಯ ಕಲಾವಿದರು ಇದ್ದಾರೆ. ಈ ಸಿನಿಮಾವು 2 ಗಂಟೆ 27 ನಿಮಿಷವಿದ್ದು, ಸುಮಾರು 6 ರಿಂದ 8 ಕೋಟಿ ಚಿತ್ರ ನಿರ್ಮಾಣಕ್ಕೆ ಖರ್ಚಾಗಿದೆ ಎಂದು ಹೇಳಿದರು.

See also  ಚಂದನವನಕ್ಕೆ ಐಟಿ ಶಾಕ್: ಯಶ್, ಸುದೀಪ್, ಪುನೀತ್, ಶಿವರಾಜ್ ಕುಮಾರ್ ಮನೆ ಮೇಲೆ ದಾಳಿ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು