ಕನ್ನಡದ ಬಿಗ್ ಬಾಸ್ ಸೀಸನ್ 4 ಈಗಾಗಲೇ ಮುಗಿಯುವ ಹಂತದಲ್ಲಿದ್ದು, ಇದೀಗ ಬಿಗ್ ಬಾಸ್ ಗೆ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಆಗಮಿಸಲಿದ್ದಾರೆ ಎಂಬ ಸುದ್ದಿ ಕೇಳಿ ಬರುತ್ತಿದೆ.
ಹೌದು, ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಕನ್ನಡದ ಬಿಗ್ ಬಾಸ್ ಸೀಸನ್ 4 ಫಿನಾಲೆ ಕಾರ್ಯಕ್ರಮದಲ್ಲಿ ನೃತ್ಯವೊಂದಕ್ಕೆ ಹೆಜ್ಜೆ ಹಾಕುವ ಮೂಲಕ ಗ್ರಾಂಡ್ ಫಿನಾಲೆಯ ರಂಗು ಹೆಚ್ಚಿಸಲಿದ್ದಾರೆ.
ಮೂಲತಃ ಮಂಗಳೂರಿನವರಾದ ಶಿಲ್ಪಾ ಶೆಟ್ಟಿಗೆ ಕನ್ನಡ ಚಿತ್ರರಂಗದೊಂದಿಗೆ ಹಿಂದಿನಿಂದಲೂ ನಂಟು ಇದ್ದು, ರವಿಚಂದ್ರನ್ ಜೊತೆ ಪ್ರೀತ್ಸೋದ್ ತಪ್ಪಾ, ಒಂದಾಗೋಣ ಬಾ ಚಿತ್ರ ಸೇರಿದಂತೆ ಉಪೇಂದ್ರ ಜೊತೆ ಆಟೋ ಶಂಕರ್ ಚಿತ್ರದಲ್ಲಿ ನಟಿಸಿದ್ದಾರೆ.