ವಡೋದರ: ಹಿಂದಿ ಚಿತ್ರರಂಗದ ಕಿಂಗ್ ಖಾನ್ ಶಾರುಖ್ ಖಾನ್ ಅಭಿನಯದ ಬಹುನಿರೀಕ್ಷಿತ ಚಿತ್ರ ‘ರಯಿಸ್’ ಪ್ರಚಾರದ ಸಮಯ ಅಭಿಮಾನಿಗಳ ನೂಕುನುಗ್ಗಲಿನಲ್ಲಿ ಉಸಿರಾಟ ಸಮಸ್ಯೆಗೆ ತುತ್ತಾಗಿ ಓರ್ವ ಸಾವನ್ನಪ್ಪಿದ ಘಟನೆ ನಡೆದಿದೆ.
ಸೋಮವಾರ ಶಾರುಖ್ ಮುಂಬೈನಿಂದ ದೆಹಲಿಗೆ ಚಿತ್ರದ ಪ್ರಚಾರಕ್ಕೆ ಅಗಸ್ಟ್ ಕ್ರಾಂತಿ ಎಕ್ಸ್ಪ್ರೆಸ್ ರೈಲಿನಲ್ಲಿ ವಡೋದರಾಕ್ಕೆ ಹೋಗಿದ್ದ ಸಮಯದಲ್ಲಿ ಭಾರಿ ಸಂಖ್ಯೆಯ ಜನರು ರೈಲು ನಿಲ್ದಾಣದಲ್ಲಿ ಜಮಾಯಿಸಿದ್ದರಿಂದ ಓರ್ವ ಉಸಿರಾಟ ಸಮಸ್ಯೆಯಿಂದ ಮೈತಪಟ್ಟಿದ್ದು, ಈತನನ್ನು ವಡೋದರಾ ಪ್ರದೇಶದ ಸಾಮಾಜಿಕ ಕಾರ್ಯಕರ್ತ ಫರಿದ್ ಖಾನ್ ಪಠಾಣ್ ಎಂದು ಗುರುತಿಸಲಾಗಿದೆ.