ಮುಂಬೈ: ಬಾಲಿವುಡ್ ನಟಿ ಸನ್ನಿ ಲಿಯೋನ್ ಪ್ರಕಾರ ಬಾಲಿವುಡ್ ನ ಕಿಂಗ್ ಖಾನ್ ಶಾರುಕ್ ಖಾನ್ ಮತ್ತು ಬಾಡ್ ಬಾಯ್ ಸಲ್ಮಾನ್ ಖಾನ್ ನಡುವೆ ಉತ್ತಮ ಗೆಳೆತನವಿರುವಂತೆ ತೋರುತ್ತದೆ ಹಾಗೂ ಇವರಿಬ್ಬರ ನಡುವಿನ ಬಹಳ ವರ್ಷಗಳ ಗೆಳೆತನ ವ್ಯಕ್ತವಾಗುತ್ತದೆ ಎಂದು ಹೇಳಿದ್ದಾರೆ.
ನಟಿ ಸನ್ನಿ ಲಿಯೋನ್ ನಟರಾದ ಶಾರುಕ್ ಖಾನ್ ಮತ್ತು ಸಲ್ಮಾನ್ ಖಾನ್ ಅವರೊಂದಿಗೆ ಹಿಂದಿಯ ‘ಬಿಗ್ಬಾಸ್–10’ ವೇದಿಕೆ ಮೇಲೆ ಹೆಜ್ಜೆ ಹಾಕಿದ್ದು, ಬಿಗ್ಬಾಸ್ ಕಾರ್ಯಕ್ರಮದಲ್ಲಿ ‘ರಯೀಸ್’ ಚಿತ್ರದ ಪ್ರಚಾರಕ್ಕಾಗಿ ಶಾರುಕ್ ಖಾನ್ ಭಾಗವಹಿಸಿದ್ದ ಸಂದರ್ಭ ಸನ್ನಿ ಲಿಯೋನ್ ವೇದಿಕೆ ಹಂಚಿಕೊಂಡಿದ್ದರು.
ಸಲ್ಮಾನ್ ಖಾನ್ ನಿರೂಪಿಸುತ್ತಿರುವ ಕಾರ್ಯಕ್ರಮ ಇದಾಗಿದ್ದು, ಇಬ್ಬರು ಖಾನ್ರೊಂದಿಗೆ ವೇದಿಕೆ ಹಂಚಿಕೊಳ್ಳುವ ಕ್ಷಣ ತುಂಬ ಸಂತೋಷದಾಯಕವಾದದ್ದು’ ಶಾರುಕ್, ಸಲ್ಮಾನ್ ಇಬ್ಬರು ಹಲವು ವರ್ಷಗಳಿಂದ ಒಳ್ಳೆಯ ಸ್ನೇಹಿತರಾಗಿದ್ದು, ಅವರ ಮೇಲೆ ಅಪಾರವಾದ ನಂಬಿಕೆ ಹೊಂದಿರುವುದಾಗಿ ಎಂದು ಸನ್ನಿ ಲಿಯೋನ್ ಹೇಳಿದ್ದಾರೆ.