ನಿರ್ದೇಶಕ ಸಿಂಪಲ್ ಸುನಿಯವರು ದಾಂಪತ್ಯ ಜೀವನಕ್ಕೆ ಕಾಲಿಡಲು ಸಿದ್ದರಾಗಿದ್ದಾರೆ. ಸಿಂಪಲ್ ಆಗಿ ಲವ್ ಸ್ಟೋರಿ ಹೇಳಿದ್ದ ಸುನಿ ಈಗ ವಿವಾಹವಾಗಲು ಹೊರಟಿರುವುದು ಎಲ್ಲರಿಗೂ ಸಂತಸದ ಸುದ್ದಿಯಾಗಿದೆ.
ವಕೀಲ ವಿದ್ಯಾರ್ಥಿಯಾಗಿದ್ದ ಸೌಂದರ್ಯಗೆ ಮನಸೋತ ಸುನಿ, ಫೆಬ್ರವರಿಯಲ್ಲಿ ಹಸೆಮನೆಯೇರಲಿದ್ದಾರೆ. ಸುಮ್ನೆ ಹೀಗೆ ಮೆಸೇಜ್ ಮಾಡಿ ಸುನಿಯ ಕೆಲಸದ ಬಗ್ಗೆ ಮೆಚ್ಚುಗೆ ಸೂಚಿಸಿದ್ದ ಸೌಂದರ್ಯ ನಂತರ ಗೆಳತಿ ಕೂಡಾ ಆದರು. ನಂಗೂ ಸಿನಿಮಾ ಇಷ್ಟ ಎಂದವರು ಡೈರೆಕ್ಷನ್ ಹೇಳಿಕೊಡಿ ಎಂದಾಗ ಸುನಿ ಒಂದು ಕ್ಷಣ ಅವಾಕ್ಕಾದ್ರಂತೆ. ಇದೆಲ್ಲಾ ನಡೆದು ನಂತರ ಆಕೆ ತನ್ನ ವಕೀಲೆಯಾಗೋ ಗುರಿಗೆ ಟಾಟಾ ಬೈಬೈ ಹೇಳಿ ಈಗ ಸುನಿ ಜೊತೆ ಏಳು ಹೆಜ್ಜೆ ಹಾಕೋಕೆ ಸಜ್ಜಾಗಿದ್ದಾರೆ.