ಮೈಸೂರಿನ ಖಾಸಗಿ ಹೋಟೆಲ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ನಟಿ ಅನುಪ್ರಭಾಕರ್, ಹಾಗೂ ನಟ ರಾಜೇಶ್ ತ್ರಿವೇಣಿ ಸಂಗಮ ಧಾರಾವಾಹಿಯ ಪೋಸ್ಟರ್ ಬಿಡುಗಡೆಗೊಳಿಸಿದರು.
ಈ ಸಂದರ್ಭ ನಿರ್ಮಾಪಕ ಪಿ.ಎಲ್ ಸೋಮಶೇಖರ್ ಮಾತನಾಡಿ ಫೆಬ್ರವರಿ 6ರಿಂದ ಸಂಜೆ 7ಗಂಟೆಗೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ತ್ರಿವೇಣಿ ಸಂಗಮ ಧಾರಾವಾಹಿ ಪ್ರಸಾರವಾಗಲಿದೆ. ನಟಿ ಅನುಪ್ರಭಾಕರ್, ನಟರಂಗ ರಾಜೇಶ್ ಮುಖ್ಯ ಭೂಮಿಕೆಯಲ್ಲಿದ್ದಾರೆ. ಕುಟುಂಬದವರೆಲ್ಲರೂ ಕುಳಿತು ನೋಡಬಹುದಾದ ಹೃದಯಸ್ಪರ್ಶಿ ಧಾರಾವಾಹಿ ಇದಾಗಿದೆ ಎಂದು ತಿಳಿಸಿದರು.
ಸ್ಟಾರ್ ಸುವರ್ಣ ವಾಹಿನಿಯಲ್ಲಿ ಫೆಬ್ರವರಿ 6ರಿಂದ ಆರಂಭವಾಗಲಿರುವ ತ್ರಿವೇಣಿ ಸಂಗಮ ಧಾರಾವಾಹಿಯ ಪೋಸ್ಟರ್ ನ್ನು ಮೈಸೂರಿನಲ್ಲಿ ಬಿಡುಗಡೆಗೊಳಿಸಲಾಯಿತು. ಈ ಸಂದರ್ಭ ಕೆಂಪೇಗೌಡ, ನಿರ್ದೇಶಕ ತಿಲಕ್, ಕ್ರಿಯೇಟಿವ್ ಹೆಡ್ ಎಸ್.ಗೋವಿಂದು, ನಿರ್ಮಾಪಕರಾದ ಸೋಮಶೇಖರ್, ಸತೀಶ್ ರಾಜಣ್ಣ ಚ.ನಾ. ಅನಂತ್ರಾಜ್ ಮತ್ತಿತರರು ಉಪಸ್ಥಿತರಿದ್ದರು.