ಬೆಂಗಳೂರು: ಡಿ.ಸತ್ಯಪ್ರಕಾಶ್ ನಿರ್ದೇಶನದ ‘ರಾಮಾ ರಾಮಾ ರೇ’ ಚಿತ್ರ ಕನ್ನಡ ಚಿತ್ರರಸಿಕರ ಮೆಚ್ಚಗೆಗೆ ಗಳಿಸಿದ್ದು, ಕೆ. ಜಯರಾಮ್, ನಟರಾಜ್ ಮತ್ತು ಬಿಂಬಶ್ರೀ ನೀನಾಸಂ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದರು.
ಇದೀಗ ಈ ಚಿತ್ರ ಹಿಂದಿ ಭಾಷೆಯಲ್ಲಿ ಬರಲಿದೆ..ಹೌದು, ಈ ಹಿಂದೆ ‘ರಾಮ ರಾಮ ರೇ’ ಚಿತ್ರವನ್ನು ಹಿಂದಿಯಲ್ಲಿ ರಿಮೇಕ್ ಮಾಡಲಾಗುತ್ತಿದೆ ಎಂಬ ಸುದ್ದಿ ಕೇಳಿ ಬಂದಿತ್ತಾದರೂ, ಇದೀಗ ಈ ಚಿತ್ರವನ್ನು ರಿಮೇಕ್ ಅಲ್ಲ ಹಿಂದಿಗೆ ಡಬ್ ಮಾಡಲಾಗುತ್ತಿದೆ ಎಂದು ಹೇಳಲಾಗುತ್ತಿದೆ.
ವಾಸುಕಿ ವೈಭವ್ ಸಂಗೀತ ನಿರ್ದೇಶನ ಮಾಡಿದ್ದ ಈ ಚಿತ್ರ ಬೆಂಗಳೂರು ಅಂತರರಾಷ್ಟ್ರೀಯ ಸಿನಿಮೋತ್ಸವದಲ್ಲಿ ಪ್ರದರ್ಶನ ಕಾಣುತ್ತಿದೆ.