ಕೆಂಡಸಂಪಿಗೆ ಮೂಲಕ ಸ್ಯಾಂಡಲ್ ವುಡ್ ಗೆ ಪರಿಚಯವಾದ ಮಾನ್ವಿತಾ ಹರೀಶ್ ಟಗರು ಚಿತ್ರದ ನಂತರ ಮತ್ತೊಂದು ಹೊಸ ಚಿತ್ರಕ್ಕೆ ಸಹಿ ಮಾಡಿದ್ದಾರೆ.
‘ಅಕಿರ’ ಖ್ಯಾತಿಯ ನವೀನ್ ರೆಡ್ಡಿ ಆಕ್ಷನ್-ಕಟ್ ಹೇಳಲಿರುವ ಇನ್ನೂ ಹೆಸರಿಡದ ಚಿತ್ರಕ್ಕೆ ಮಾನ್ವಿತಾ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಈ ಚಿತ್ರದಲ್ಲಿ ಮಾನ್ವಿತಾಗೆ ಜೋಡಿಯಾಗಿ ನವ ನಟ ಪ್ರಭು ಅಭಿನಯಿಸಲಿದ್ದಾರೆ. ಇದು ಕಾಮಿಡಿ ಥ್ರಿಲ್ಲರ್ ಸಬ್ಜೆಕ್ಟ್ ಆಗಿದ್ದು, ಜತೆಗೆ ಸಸ್ಪೆನ್ಸ್ ನಿಂದ ಕೂಡಿದೆಯಂತೆ. ಇದೇ ಮೊದಲ ಬಾರಿಗೆ ಇಂತಹ ಚಿತ್ರದಲ್ಲಿ ನಟಿಸುವ ಅವಕಾಶ ಸಿಕ್ಕಿರುವುದರಿಂದ ಮಾನ್ವಿತಾ ಸಖತ್ ಎಕ್ಸೈಟ್ ಆಗಿದ್ದಾರೆ.
ಪ್ರಭು ಮತ್ತು ಮಾನ್ವಿತಾ ಜತೆಗೆ ‘ಉಗ್ರಂ’ ಖ್ಯಾತಿಯ ಮಂಜು ಕೂಡ ಪ್ರಮುಖ ಪಾತ್ರ ನಿಭಾಯಿಸಲಿದ್ದಾರೆ ಎಂದು ತಿಳಿದು ಬಂದಿದೆ. ಯೋಗಿ ಕ್ಯಾಮರಾ, ಶ್ರೀಕಾಂತ್ ಸಂಕಲನ ಇರಲಿದೆ. ತೆಗೆದುಕೊಂಡಿರುವ ಪ್ರಾನಿಂಗ್ ಸಕ್ಸಸ್ ಆದರೆ ಮಾರ್ಚ್ ನಂತರ ಶೂಟಿಂಗ್ ಪ್ರಾರಂಭಿಸಲಾಗುವುದು ಎಂದು ನಿರ್ದೇಶಕ ಹೇಳಿದ್ದಾರೆ.